January 30, 2026

Newsnap Kannada

The World at your finger tips!

acid dali

ಪ್ರೀತಿಸುವಂತೆ ಪೀಡಿಸಿದ.. ನಿರಾಕರಿಸಿದ್ದಕ್ಕೆ, ಬದುಕು ನಾಶ ಮಾಡಿದ.. ಅ್ಯಸಿಡ್ ದಾಳಿಗೆ ಒಳಗಾದ ಯುವತಿಯ ರೋಧನ

Spread the love

ಆಕೆ ನಿಜಕ್ಕೂ ಅಮಾಯಕಳು. ತಾನು ಮಾಡದ ತಪ್ಪಿಗೆ ನಕರ ಯಾತನೆ ಅನುಭವಿಸುವ ಆ ಯುವತಿ ಆ್ಯಸಿಡ್ ದಾಳಿಗೆ ಒಳಗಾದ ಕಥೆ ದುರಂತಕ್ಕೆ ಕಾರಣವಾಗಿದೆ.

ಆ ಯುವತಿ ತನ್ನನ್ನು ಪ್ರೀತಿಸಿಸುತ್ತಿಲ್ಲ. ಆಕೆ ಮದುವೆಯಾಗಲು ಒಪ್ಪಿಗೆ ನೀಡುತ್ತಿಲ್ಲ ಎಂಬ ಸಣ್ಣ ಕಾರಣಕ್ಕಾಗಿ ಯುವತಿ ಮೇಲೆ ಆ್ಯಸಿಡ್ ಎರಚಿದ ಪರಾರಿಯಾದ ಪಾಗಲ್ ಪ್ರೇಮಿ ನಾಗೇಶ್ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ.

ಆ ಯುವತಿ ನೀಡಿರುವ ಹೇಳಿಕೆ ಆಧರಿಸಿ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ

ಅಪ್ಪ ಅಮ್ಮನಿಗೆ ನಾವು ಮೂರು ಜನ ಮಕ್ಕಳು. ಅಕ್ಕ ಸಾಪ್ಟ್ ವೇರ್ ಎಂಜಿನಿಯರ್ , ನಾನು ಮುತ್ತುಟ್ ಪೈನಾನ್ಸ್ ಕ್ಯಾಷಿಯರ್ ಹಾಗೂ ನನ್ನ ಪಿಯುಸಿ. ಅಮ್ಮ ಗೃಹಿಣಿ.

ನಾನು ಆಪೀಸ್ ಗೆ ಹೋಗಬೇಕು ಎಂದಾಗ ಅಪ್ಪ ನಿನ್ನೆ ವಾಹನದಲ್ಲಿ ಡ್ರಾಪ್ ಮಾಡಿ ಹೋದರು. ಈ ಕಿರಾತಕ ನಾಗೇಶ್ ನನ್ನ ಬಳಿ ಬಂದು, ನಂಗೆ ಸಿಗದೇ ಇರುವ ನೀನು ಯಾರಿಗೂ ಸಿಗಬಾರದು ಎಂದು ಹೇಳಿ ಪ್ಲಾಸ್ಟಿಕ್ ಕವರ್ ನಲ್ಲಿ ತಂದಿದ್ದ ಆ್ಯಸಿಡ್ ಅನ್ನು ಎರಚಿ ಪರಾರಿಯಾದ ಎಂದು ಯುವತಿ ಹೇಳಿಕೆ ನೀಡಿದ್ದಾಳೆ.

ಅವನಿಗೆ ಸರಿಯಾದ ಶಿಕ್ಷೆಯಾಗಬೇಕು. ನನ್ನ ಜೀವನ, ಬದುಕು ಹಾಳು ಮಾಡಿದ ಆ ವ್ಯಕ್ತಿಯನ್ನು ನಾನು ಎಂದೂ ಕಣ್ಣು ಎತ್ತಿ ನೋಡಲಿಲ್ಲ ಎಂದು ಪಾಗಲ್ ಪ್ರೇಮಿ ಬಗ್ಗೆ ಆ ಯುವತಿ ಹೇಳಿದಿಷ್ಟು.

  • ಅ್ಯಸಿಡ್ ದಾಳಿ
  • ಅ್ಯಸಿಡ್ ದಾಳಿ
error: Content is protected !!