May 26, 2022

Newsnap Kannada

The World at your finger tips!

jamir ahamad

ಮೆಕ್ಕಾದಲ್ಲಿರುವ ಶಾಸಕ ಜಮೀರ್, ಹುಬ್ಬಳ್ಳಿ ಗಲಭೆಕೋರರಿಗೆ ನೆರವಿನ ಹಸ್ತ: 5 ಸಾವಿರ ನಗದು, ಪುಡ್ ಕಿಟ್

Spread the love

ಹುಬ್ಬಳ್ಳಿಯಲ್ಲಿ ಕಲ್ಲು ಹೊಡೆದವರಿಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್‌ ಖಾನ್‌ ಅವರು ಸಹಾಯ ಮಾಡುತ್ತಿದ್ದಾರೆ.

ದೇಗುಲ, ಪೊಲೀಸ್ ಠಾಣೆಗೆ ಕಲ್ಲು ಹೊಡೆದವರ ಕುಟುಂಬಗಳಿಗೆ ಜಮೀರ್ ನೆರವು ನೀಡಲು ನಿರ್ಧರಿಸಿದ್ದಾರೆ.

ಕಲ್ಲು ಹೊಡೆದು ಬಂಧನಕ್ಕೆ ಒಳಗಾದವರ ಪರ ಜಮೀರ್ ನಿಂತು, ಗಲಭೆಕೋರರಿಗೆ ಜಮೀರ್ 5 ಸಾವಿರ ನಗದು ಹಾಗೂ ರಂಜಾನ್ ಫುಡ್‍ಕಿಟ್ ನೀಡುತ್ತಿರುವ ಮೂಲಕ ಇದೀಗ ಮತ್ತೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಂಧನಕ್ಕೊಳಗಾದ ಕಿಡಿಗೇಡಿಗಳ ಕುಟುಂಬಗಳಿಗೆ ಇಂದು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಯಲ್ಲಿ ಹಣ ಹಾಗೂ ಫುಡ್‍ಕಿಟ್ ಹಂಚಿಕೆ ಮಾಡಲಿದ್ದಾರೆ

ಕಸಬಾ ಪೇಟೆ ಪೊಲೀಸ್ ಠಾಣೆ ಬಳಿಯ ಮಸ್ತಾನ್ ಷಾ ಶಾದಿ ಮಹಲ್‍ನಲ್ಲಿ ಬೆಂಬಲಿಗರ ಮೂಲಕ ಜಮೀರ್ ಅಹ್ಮದ್ ಸಹಾಯ ಮಾಡಲಿದ್ದಾರೆ.

ರಂಜಾನ್ ಹಿನ್ನೆಲೆ ಮೆಕ್ಕಾದಲ್ಲಿರುವ ಜಮೀರ್ ಅಹ್ಮದ್, ಅಲ್ಲಿಂದಲೇ ಗಲಭೆಕೋರರಿಗೆ ಸಹಾಯಹಸ್ತ ಚಾಚಿದ್ದಾರೆದ.

error: Content is protected !!