ಪೇಜಾವರ ಶ್ರೀಗಳ ಕುರಿತ ಹೇಳಿಕೆ: ಹಂಸಲೇಖಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್

Team Newsnap
1 Min Read

ಉಡುಪಿ ಪೇಜಾವರ ಶ್ರೀಗಳ ಕುರಿತು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವಹೇಳನ ಕರ ಹೇಳಿಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈ ಕೋರ್ಟ್​​ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ರದ್ದು ಕೋರಿ ಹಂಸಲೇಖ ರಿಟ್ ಅರ್ಜಿ ಸಲ್ಲಿಕೆ ಸಲ್ಲಿಸಿದ್ದರು

ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಸದ್ಯ ಪ್ರಕರಣದ ತನಿಖೆಗೆ ತಡೆ ನೀಡಿ ಆದೇಶ ನೀಡಿದೆ.

ಹಂಸಲೇಖ ಪರ ವಕೀಲ ಕಾಶೀನಾಥ್​​, ಸಿಎಸ್​​​ ದ್ವಾರಕಾನಾಥ್ ವಾದ ಮಂಡಿಸಿದ್ದರು.

ಪ್ರಕರಣದ ಸಂಬಂಧ ನವೆಂಬರ್​ 25ರಂದು ಬಸವನಗುಡಿ ಠಾಣೆಗೆ ಆಗಮಿಸಿದ್ದ ಹಂಸಲೇಖ ಅವರು ಪೊಲೀಸ್ ವಿಚಾರಣೆಯನ್ನು ಎದುರಿಸಿದ್ದರು.

ಅಂದು ಬಸವನಗುಡಿ ಪೊಲೀಸ್​​ ಠಾಣೆ ಮುಂಭಾಗ ಹಂಸಲೇಖ ಅವರನ್ನು ಬೆಂಬಲಿಸಿ ನಟ ಚೇತನ್​​ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಗಮಿಸಿದ್ದರು.

ಭಜರಂಗ ದಳ ಸಂಘಟನೆಯ ಕಾರ್ಯಕರ್ತರು ಹಂಸಲೇಖ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದರು.

Share This Article
Leave a comment