ಬರ್ತ್​​​​ಡೇ ಪಾರ್ಟಿ ತಂದ ಅವಾಂತರ – 10 ಮಂದಿಗೆ ಪಾಸಿಟೀವ್ : ಸೀಲ್​ಡೌನ್

Team Newsnap
1 Min Read

ಕೊರೊನಾರೂಪ ಬದಲಿಸಿಕೊಂಡು ಮತ್ತೆ ಹೆಮ್ಮಾರಿ ಕರಾಳತೆಯನ್ನು ತೋರಲು ಆರಂಭಿಸಿದೆ, ರಾಜ್ಯದ ರಾಜಧಾನಿ ಬೆಂಗಳೂರಿಗೂ ಆತಂಕ ಶುರುವಾಗಿದೆ.

ಈ ನಡುವೆ ಬರ್ತ್​ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ 10ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್​​​ ವರದಿ ಬಂದಿರುವ ಘಟನೆ ಕೋರಮಂಗಲದ ರಹೇಜ ರೆಸಿಡೆನ್ಸಿ ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ನಡೆದಿದೆ.

ಬಿಬಿಎಂಪಿ ಸದ್ಯ ಅಪಾರ್ಟ್ಮೆಂಟ್ ನ ಫ್ಲಾಟ್​​ ಅನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದು, ಎಲ್ಲರ ಸ್ಯಾಂಪಲ್‌ ಗಳನ್ನ ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಿಕೊಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ಅಪಾರ್ಟ್ಮೆಂಟ್ ನ ಫ್ಲಾಟ್​​ನಲ್ಲಿ ಬರ್ತ್​​​ಡೇ ಪಾರ್ಟಿ ನಡೆಸಲಾಗಿತ್ತು.

ಪಾರ್ಟಿಯಲ್ಲಿ 16ಕ್ಕೂ ಹೆಚ್ಚು ಮಂದಿ ಸೇರಿದ್ದರು. ಇದರಲ್ಲಿ 10 ಮಂದಿಯ ವರದಿ ಪಾಸಿಟವ್​ ಬಂದಿದೆ.

ಸದ್ಯ ಅಪಾರ್ಟ್‌ಮೆಂಟ್ ಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬರ್ತ್ ಡೇ ಪಾರ್ಟಿ ಗೆ ಬಂದಿರುವ ಎಲ್ಲಾ ಜನರ ಸ್ವಾಬ್ ಅನ್ನು ಸ್ವೀಕರಿಸಿದ್ದಾರೆ. ಅಲ್ಲದೇ ಅಪಾರ್ಟ್ಮೆಂಟ್ ನ ಫ್ಲಾಟ್ ಜೊತೆಗೆ ಬರ್ತ್​​​ಡೇ ಪಾರ್ಟಿಗೆ ಬಂದಿರುವ ಸಂಬಂಧಿಕರ ಮನೆಗಳನ್ನೂ ಕಂಟೈನ್ಮೆಂಟ್ ಜೋನ್ ಎಂದು ಗುರುತು ಮಾಡಿ, ಎಲ್ಲರ ಸ್ಯಾಂಪಲ್‌ ಗಳನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

Share This Article
Leave a comment