ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ : ಮಂಡ್ಯದಲ್ಲಿ ಶೇ 74. 14 ರಷ್ಟು ಮತದಾನ

Team Newsnap
1 Min Read

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯ ಮತದಾನ ಮಂಡ್ಯ ಜಿಲ್ಲೆಯಲ್ಲಿ ಭಾನುವಾರ ನಡೆದ ಶಾಂತಿಯುತವಾಗಿ ಶೇ.74.14 ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7ರಿಂದ ಸಂಜೆ 5 ರ ವರೆಗೆ ನಡೆದ ಮತದಾನದಲ್ಲಿ ಮತದಾರರು ಉತ್ಸಾಹದಿಂದ ಬಿರುಸಿನಿಂದಲೇ ಮತದಾನ ಮಾಡಿದರು.

68096 ಮತದಾರರಿಂದ ಹಕ್ಕು ಚಲಾವಣೆ:

ಜಿಲ್ಲೆಯಲ್ಲಿ ನಾಲ್ಕು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು.

ಒಟ್ಟು 16 ಮಂದಿ ಕಣದಲ್ಲಿದ್ದರು. ಜಿಲ್ಲೆಯಲ್ಲಿ ಒಟ್ಟು 91845 ಮತದಾರರ ಪೈಕಿ 68096 ಜನರು ಮತದಾನ ಮಾಡಿದ್ದಾರೆ.

ಯಾವ ತಾಲೂಕಿನಲ್ಲಿ ಎಷ್ಟು ?

ಮಂಡ್ಯ 22122,

ಮದ್ದೂರು17678

,ನಾಗಮಂಗಲ 11612,

ಶ್ರೀರಂಗಪಟ್ಟಣ 3275

ಮಳವಳ್ಳಿ 6582

ಪಾಂಡವಪುರ 3125

ಕೆ.ಆರ್.ಪೇಟೆ 3702

ಮಂದಿ ಮತದಾನ ಮಾಡಿದ್ದಾರೆ.

ಅಭ್ಯರ್ಥಿಗಳಿಂದ ಮನವಿ:

ಬೆಳಿಗ್ಗೆ7 ಕ್ಕೆ ಆರಂಭವಾದ ಮತದಾನ ಸಂಜೆ 5 ರವರೆಗೂ ನಡೆಯಿತು. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಮುಂದಾಗಿದ್ದರು.

ಮಂಡ್ಯದ ಮಹಿಳಾ ಕಾಲೇಜು, ಕಲ್ಲು ಕಟ್ಟಡ ಹಾಗೂ ಗುತ್ತಲು ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಮತದಾನ ನಡೆಯಿತು.

ಮತದಾನಕ್ಕೆ ಆಗಮಿಸುವ ಮತದಾರರನ್ನು ಅಭ್ಯರ್ಥಿಗಳ ಕಡೆಯವರು ಅಡ್ಡಗಟ್ಟುತ್ತಾ ತಮ್ಮ ಕಡೆಯ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡುತ್ತಾ ಕರಪತ್ರಗಳನ್ನು ನೀಡುತ್ತಿದ್ದರು.
ಕಡೆಯ ಗಳಿಗೆಯಲ್ಲೂ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದರು.

Share This Article
Leave a comment