March 14, 2026

Newsnap Kannada

The World at your finger tips!

cow

ಶ್ರೀರಂಗಪಟ್ಟಣ: ದನಕರುಗಳ ದಾರುಣ ಸಾವು

Spread the love

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಚಂದಗಾಲು ಗ್ರಾಮದ ರೈತರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳು ದಾರುಣ ಸಾವು ಕಂಡಿದೆ.

ಚಂದಗಾಲು ಗ್ರಾಮದ ಶ್ರೀನಿವಾಸಯ್ಯ ರವರ ಮಗ ನಾರಾಯಣ ಎಂಬುವರ ಮನೆಯಲ್ಲಿ ಈ ಘಟನೆ ಜರುಗಿದೆ.
3ಹಸುಗಳು 2 ಟಗರುಗಳು ದಾರುಣ ಸಾವು ಕಂಡಿವೆ.

ತಡರಾತ್ರಿ ದನಕರುಗಳಿಗೆ ಮೇವು ಹಾಕಿದರೆ ಬೆಳಿಗ್ಗೆ ಹಾಲು ಕರೆಯಲು ಬಂದ ಸಂದರ್ಭದಲ್ಲಿ ಸಾವನ್ನಪ್ಪಿರುವ ಘಟನೆಯನ್ನು ನೋಡಿ ರೈತ ಗಾಬರಿಗೊಂಡರು. ದನ ಕರುಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

error: Content is protected !!