December 23, 2024

Newsnap Kannada

The World at your finger tips!

birappa

ಶ್ರೀರಂಗಪಟ್ಟಣ ಇಓ ಭೈರಪ್ಪ ಲಂಚ ಬಾಕ : ಪರ್ಸಂಟೇಜ್ ಗಾಗಿ ಪಿಡಿಓಗಳಿಗೆ ಕಿರುಕುಳ – ದೂರು

Spread the love

ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಪರ್ಸಂಟೆಜ್ ಗಾಗಿ ಕಿರುಕುಳ ನೀಡುವ ಶ್ರೀರಂಗಪಟ್ಟಣ ಇಓ ಭೈರಪ್ಪನ ವಿರುದ್ದ ಸಕಾ೯ರಕ್ಕೆ ದೂರು ನೀಡಿರುವ ವರದಿ ಬೆಳಕಿಗೆ ಬಂದಿದೆ.

ಪ್ರತಿ. ಯೋಜನೆಯಲ್ಲಿ ತನಗೆ ಪರ್ಸಂಟೇಜ್ ನೀಡದಿದ್ದರ ತೊಂದರೆ ಕೊಟ್ಟು ಮೇಲಧಿಕಾರಿಗೆ ದೂರು ಕೊಡುವ ಎಚ್ಚರಿಕೆ ನೀಡುವ ಈ ಭೈರಪ್ಪ ಮಂಡ್ಯದಲೊಬ್ಬ ಪರ್ಸಂಟೆಜ್ ಅಧಿಕಾರಿ ಎಂದೇ ಫೇಮಸ್ ಎನ್ನುವ ಆರೋಪ ಪಿಡಿಓಗಳದ್ದು.

ಇಓ ಬೈರಪ್ಪ ಪರ್ಸೆಂಟೇಜ್ ಲೆಕ್ಕದಲ್ಲಿ ಲಂಚ ವಸೂಲಿ ಮಾಡುತ್ತಾರಂತೆ ಎಂದು ಬೈರಪ್ಪ ವಿರುದ್ಧ ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯ ಪಿಡಿಓಗಳಿಂದ ಗಂಭೀರ ಆರೋಪ ಮಾಡಿದ್ದಾರೆ.

ಕಾಮಗಾರಿ ಹಾಗೂ ಯೋಜನೆಗಳ ಬಿಲ್ ಮಂಜೂರು ಮಾಡಲು ಪರ್ಸಂಟೇಜ್ ಕೊಡಬೇಕು ಪರ್ಸಂಟೆಜ್ ನೀಡಲಿಲ್ಲ ಎಂದರೆ ಬಿಲ್ ಪಾಸ್ ಮಾಡಲ್ಲ ಎಂಬ ಬೆದರಿಕೆ ಬೇರೆ ಹಾಕ್ತಾರಂತೆ. ಶೇ.4ರಿಂದ ಶೇ.20ರಷ್ಟು ಪರ್ಸಂಟೆಜ್‌ಗೆ ಪೀಡಿಸುವ ಇಓ ಇ ಸ್ವತ್ತು ಮಾಡಿಸುವವರಿಂದ ಹಣ ಪಡೆದು ತನಗೂ ಕೊಡಿ ಎನ್ನುತಾನಂತೆ.

ಪಿಡಿಓಗಳು ಒಂದಿಷ್ಟು ಪ್ರಮಾಣದಲ್ಲಿ ಹಣ ನೀಡಿದರೂ ಭೈರಪ್ಪಗೆ ಮಾತ್ರ ಹಣದ ದಾಹ ನೀಗುವುದಿಲ್ಲ ಹೀಗಾಗಿಯೇ ಇಓ ಭೈರಪ್ಪ ಕಿರುಕುಳಕ್ಕೆ ಬೇಸತ್ತ ಪಿಡಿಓಗಳಿಂದ ಸಕಾ೯ರದ ಪಂಚಾಯತ್ ರಾಜ್ಯ ಇಲಾಖೆಯ ಪ್ರದಾನ ಕಾರ್ಯದರ್ಶಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ವಿಡಿಯೋ ವೈರಲ್ :

ಇಓ ಬೈರಪ್ಪ ಪರ್ಸಂಟೆಜ್ ಕೇಳುತ್ತಿರುವ ಆಡಿಯೋ , ವಿಡಿಯೋ ಈಗ ಮಂಡ್ಯದಲ್ಲಿ ವೈರಲ್ ಆಗಿದೆ.

ಕಿರುಕುಳ ತಾಳಲಾರದೇ ವಿಡಿಯೋ ಮತ್ತು ಆಡಿಯೋ ಮಾಡಿರುವ ಪಿಡಿಓಗಳು ಇಓ ಬೈರಪ್ಪ ಪರ್ಸಂಟೆಜ್ ಕೇಳುತ್ತಿರುವ ಆಡಿಯೋ ವಿಡಿಯೋ ವೈರಲ್ ಮಾಡಿದ್ದಾರೆ. ಸಿಇಓ ದಿವ್ಯ ಪ್ರಭು ಅವರು ತಕ್ಷಣವೇ ಭೈರಪ್ಪನ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!