ಗ್ರಾ ಪಂ ಚುನಾವಣೆಗೂ ಪ್ರಣಾಳಿಕೆ:ಗಮನಸೆಳೆದ ಅಭ್ಯರ್ಥಿ ಶ್ರೀನಿವಾಸ್

Team Newsnap
2 Min Read

ಕೆ ಆರ್ ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾ ಪಂ ಕ್ಷೇತ್ರದ ಚಿಲ್ಲದ ಹಳ್ಳಿ ವಾರ್ಡಿನಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಯೊಬ್ಬರು ಮತದಾರರಿಗೆ ಚುನಾವಣಾ ಪ್ರಣಾಳಿಕೆಯಲ್ಲಿ 25 ಭರವಸೆ ಮತಯಾಚನೆ ಆರಂಭಿಸಿದ್ದಾರೆ.

ಡಿ. 27ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆ ಭರದಿಂದ ಮತ ಪ್ರಚಾರ ನಡೆಯುತ್ತದೆ. ಚಿಲ್ಲದಹಳ್ಳಿ ಕ್ಷೇತ್ರದಿಂದ ಪದವೀಧರ ಹಾಗೂ ಪತ್ರಕರ್ತ ಆರ್. ಶ್ರೀನಿವಾಸ್ 25 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿ ಸಮಗ್ರ ಗ್ರಾಮಾಭಿವೃದ್ಧಿ ಆಶಯವನ್ನು ಇಟ್ಟುಕೊಂಡು ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ.

ಚಿಲ್ಲದಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ ನೀಡಿ ಗೆಲ್ಲಿಸಬೇಕೆಂದು ಪ್ರಣಾಳಿಕೆ ಬಿಡುಗಡೆ ವಿವರ ಹೀಗಿದೆ.

  • ಚಿಲ್ಲದಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ಮಾಯಮ್ಮದೇವಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಾಲಯಗಳ ಅಭಿವೃದ್ದಿಗೆ ಅಗತ್ಯ ಶ್ರಮ ವಹಿಸಲಾಗುವುದು.
  • ಚಿಲ್ಲದಹಳ್ಳಿ ಗ್ರಾಮದಲ್ಲಿನ ಪ್ರತಿಯೊಂದು ಬೀದಿಗಳಿಗೆ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಸಿಮೆಂಟ್ ರಸ್ತೆ ಮತ್ತು ಹೈಟೆಕ್ ಬಾಕ್ಸ್ ಚರಂಡಿ ನಿರ್ಮಿಸಲಾಗುವುದು.
  • ಚಿಲ್ಲದಹಳ್ಳಿ ಗ್ರಾಮದಲ್ಲಿ ಗೋಡೆ ಕುಸಿದಿರುವ ಎಲ್ಲಾ ಮನೆಗಳಿಗೆ ತಹಸೀಲ್ದಾರ್ ರವರಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ.
  • 60 ವರ್ಷ ವಯಸ್ಸಾದವರಿಗೆ ವೃದ್ದಾಪ್ಯ ವೇತನ ಹಾಗೂ 65 ವರ್ಷ ವಯಸ್ಸಾದವರಿಗೆ ಸಂದ್ಯಾಸುರಕ್ಷಾ ಯೋಜನೆ ಅಡಿಯಲ್ಲಿ ಮಾಸಿಕ ಮಾಸಾಶನ .
  • ಸ್ವಂತ ಖರ್ಚಿನಿಂದ ಚಿಲ್ಲದಹಳ್ಳಿ ಗ್ರಾಮದ ಶಾಲೆಯಲ್ಲಿ ವಾಚನಾಲಯ, ಗ್ರಂಥಾಲಯ ಆರಂಭಿಸಲು ಅಗತ್ಯ ಕ್ರಮ. ಹಾಗೂ ವಿದ್ಯಾವಂತ ಯುವ ಜನರಿಗೆ ಅಗತ್ಯ ಉದ್ಯೋಗ ಮಾರ್ಗದರ್ಶಿ ಶಿಬಿರ.
  • ಚಿಲ್ಲದಹಳ್ಳಿ ಗ್ರಾಮದ ಸುತ್ತಲೂ ಹೇಮಾವತಿ ನೀರು ಹರಿಯುವ ಕಾರಣ ಗ್ರಾಮವನ್ನು ಸರ್ಕಾರದಿಂದ ಶೀತಪೀಡಿತ ಗ್ರಾಮವೆಂದು ಘೋಷಣೆ ಮಾಡಿಸಿ ಗ್ರಾಮದ ಎಲ್ಲಾ ಮನೆ ಮತ್ತು ಕುಟುಂಬಗಳಿಗೆ ವಿಶೇಷ ಪರಿಹಾರ ಧನ ಬಿಡುಗಡೆ ಮಾಡಿಸಲು ಅಗತ್ಯ ಕ್ರಮ.
  • ಚಿಲ್ಲದಹಳ್ಳಿ ಮಾರ್ಗವಾಗಿ ತಾಲ್ಲೂಕು ಕೇಂದ್ರ ಕೆ.ಆರ್.ಪೇಟೆಗೆ ಹೋಗಿ ಬರಲು ಅಗತ್ಯ ಸಾರಿಗೆ ಸೌಲಭ್ಯ ಶ್ರಮಿಸಲಾಗು ವುದು.
  • ನಿರುದ್ಯೋಗಿ ಮಹಿಳೆಯರಿಗೆ ಸರ್ಕಾರದಿಂದ ಉಚಿತವಾಗಿ ನೀಡುವ ಹೊಲಿಗೆ ಯಂತ್ರಗಳನ್ನು ಕೊಡಿಸುವುದು. *ಪ್ರತಿ 3ತಿಂಗಳಿಗೊಮ್ಮೆ ಚಿಲ್ಲದಹಳ್ಳಿ ಗ್ರಾಮದಲ್ಲಿ ಜನ ಸಂಪರ್ಕ ಸಭೆ ನಡೆಸಿ ತಹಸೀಲ್ದಾರ್, ತಾ.ಪಂ.ಇಓ, ಗ್ರಾ.ಪಂ. ಪಿಡಿಓ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರ ಕುಂದುಕೊರತೆ ಆಲಿಸುವುದು ಹಾಗೂ ಪರಿಹಾರ ಒದಗಿಸಿಕೊಡುವುದು.
  • ಚಿಲ್ಲದಹಳ್ಳಿ ಹೊಸಬಡಾವಣೆಯಲ್ಲಿ ವಾಸಿಸುವವರಿಗೆ ನಿವೇಶನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ವಹಿಸಲಾಗು ವುದು.

25 ಭರವಸೆ ಪ್ರಣಾಳಿಕೆ ನೀಡಿರುವ ಅಭ್ಯರ್ಥಿ ಆರ್ ಶ್ರೀನಿವಾಸ್
ಚಿಲ್ಲದಹಳ್ಳಿ ಮತ್ತು ಭೈರನಪಾಳ್ಯ ಗ್ರಾಮದ ಸಮಗ್ರ ಅಭಿವೃದ್ದಿಗೆ ಶ್ರಮಿಸಲು ಆಟೋ ಗುರುತಿಗೆ ಮತ ಹಾಕವಂತೆ ಮನವಿ ಕೂಡ ಮಾಡಿದ್ದಾರೆ.

Share This Article
Leave a comment