ಶ್ರೀಲಂಕಾದಲ್ಲಿ ‘ತುರ್ತು ಪರಿಸ್ಥಿತಿ’ ಘೋಷಣೆ: ಆರ್ಥಿಕ ಬಿಕ್ಕಟ್ಟು ಉಲ್ಬಣ

Team Newsnap
1 Min Read

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ‘ಸಾರ್ವಜನಿಕ ತುರ್ತು ಪರಿಸ್ಥಿತಿ’ ಘೋಷಣೆ ಮಾಡಲಾಗಿದೆ.

ಅಧ್ಯಕ್ಷ ಗೋತಬಯ ರಾಜಪಕ್ಸೆ ಗೆಜೆಟ್ ಹೊರಡಿಸಿ ‘ಸಾರ್ವಜನಿಕ ತುರ್ತು ಪರಿಸ್ಥಿತಿ’ಯನ್ನು ಘೋಷಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳು ಮಾಡಿರುವ ವರದಿ ಪ್ರಕಾರ, ಸದ್ಯದ ಪರಿಸ್ಥಿತಿಗಳನ್ನು. ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ಅಧ್ಯಕ್ಷರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಸಾರ್ವಜನಿಕ ಸುರಕ್ಷತೆ, ಕಾನೂನು ಸುವ್ಯವಸ್ಥೆ , ಜನ ಜೀವನಕ್ಕೆ ಅಗತ್ಯವಾದ ವಸ್ತುಗಳ ಸರಬರಾಜು ಮತ್ತು ಸೇವೆಗಳ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ತುರ್ತು ಪರಿಸ್ಥಿತಿಯನ್ನ ಹೇರಲಾಗಿದೆ.

ಭಾರಿ ಆರ್ಥಿಕ ಕುಸಿತ:

ಶ್ರೀಲಂಕಾ ಭೀಕರ ಆರ್ಥಿಕತೆ ಬಿಕ್ಕಟ್ಟನ್ನ ಎದುರಿಸುತ್ತಿದೆ. ಲಂಕಾದ ಪ್ರಮುಖ ಆರ್ಥಿಕ ಆಧಾರ ಸ್ತಂಭ ಪ್ರವಾಸೋದ್ಯಮ ಕ್ಷೇತ್ರವಾಗಿದೆ. ಆದರೆ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಕ್ಷೇತ್ರ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದೆ. ಪರಿಣಣಾಮ ದೊಡ್ಡ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿದೆ.

ಕುಸಿದ ಕರೆನ್ಸಿ ಮೌಲ್ಯ:

ಶ್ರೀಲಂಕಾ ವಿದೇಶಿ ವಿನಿಮಯದ ಕೊರತೆಯನ್ನೂ ಎದುರಿಸುತ್ತಿದೆ. ಪರಿಣಾಮ ಆಹಾರ, ಇಂಧನ, ವಿದ್ಯುತ್ ಮತ್ತು ಅನಿಲದ ಕೊರತೆ ಉಂಟಾಗಿದೆ. ಆರ್ಥಿಕ ಸಹಾಯಕ್ಕಾಗಿ ಸ್ನೇಹ ರಾಷ್ಟ್ರಗಳಿಂದ ಸಹಾಯವನ್ನು ಪಡೆಯುತ್ತಿದೆ.

ವರದಿಗಳ ಪ್ರಕಾರ ದಿನಕ್ಕೆ ಕನಿಷ್ಠ 10 ಗಂಟೆಗಳ ಕಾಲ ಅಲ್ಲಿ ವಿದ್ಯುತ್ ಕಡಿತ ನಡೆಯುತ್ತಿದೆ. ಜೊತೆಗೆ ಲಂಕಾದ ಕರೆನ್ಸಿ ಕೂಡ ಕುಸಿದಿದೆ.

Share This Article
Leave a comment