May 22, 2022

Newsnap Kannada

The World at your finger tips!

petrol

ಇಂದೂ ಕೂಡ ಪೆಟ್ರೋಲ್ ಬೆಲೆ ಏರಿಕೆ: ಕೇವಲ 12 ದಿನದಲ್ಲಿ 7.20 ರು ಏರಿಕೆ

Spread the love

ದಿನೇ ದಿನೆ ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗುತ್ತಿದ ಶನಿವಾರವೂ ಕೂಡ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 80 ಪೈಸೆ ಏರಿಕೆ ಆಗಿದೆ.

ಈ ಮೂಲಕ ಪೆಟ್ರೋಲ್ ಬೆಲೆ ಲೀಟರ್​ಗೆ 102.61 ರೂಪಾಯಿ ಏರಿಕೆಯಾಗಿದೆ. ಕೇವಲ 12 ದಿನಗಳ ಅವಧಿಯಲ್ಲಿ 7.20 ರೂಪಾಯಿ ಹೆಚ್ಚಳ ಕಂಡಿದೆ.

ಡೀಸೆಲ್​ ಬೆಲೆಯಲ್ಲೂ 80 ಪೈಸೆ ಏರಿಕೆ ಕಂಡಿದ್ದು, ಲೀಟರ್ ​ಡೀಸೆಲ್ ಬೆಲೆ 93.87 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 84 ಪೈಸೆ, ಡೀಸೆಲ್ 78 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್​ ಬೆಲೆ 85 ಪೈಸೆ ಏರಿಕೆ ಆಗಿದೆ. ಈ ಮೂಲಕ ಮುಂಬೈನಲ್ಲಿ ಲೀಟರ್ ಪೆಟ್ರೋಲ್​ ಬೆಲೆ 117.57 ರೂಪಾಯಿ ಆಗಿದೆ. ಜೊತೆಗೆ ಡೀಸೆಲ್ ಬೆಲೆ 85 ಪೈಸೆ ಏರಿಕೆಯಾಗಿದ್ದು, 101.79 ರೂಪಾಯಿಗೆ ತಲುಪಿದೆ.

ಯಾವ ನಗರದಲ್ಲಿ ತೈಲ ಬೆಲೆ. ಎಷ್ಟು ?

ಪೆಟ್ರೋಲ್ ಡೀಸೆಲ್
ದೆಹಲಿ 102.61 ರು 93.87ರು
ಮುಂಬೈ 117.57ರು 101.79ರು
ಚೆನ್ನೈ 108.21ರು 98.28ರು
ಕೊಲ್ಕತ್ತಾ 112.19ರು 97.02ರು
ಬೆಂಗಳೂರು 108.14ರು ₹92.05 ರು
error: Content is protected !!