November 25, 2024

Newsnap Kannada

The World at your finger tips!

WhatsApp Image 2022 06 28 at 1.19.02 PM

ಜೂನ್ 30 ರಿಂದ ರೈತ ಮಕ್ಕಳಿಗೆ,ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ

Spread the love

ಅನನ್ಯ ಹಾರ್ಟ್ ಸಂಸ್ಥೆ ವತಿಯಿಂದ ಕೃಷಿ ಕೋಟದಡಿ ಬರುವ ರೈತ ಮಕ್ಕಳಿಗೆ ಕೃಷಿ ಮತ್ತು ಕೃಷಿಯೇತರ ವಿಜ್ಞಾನ ಕೋರ್ಸ್ ಗಳಿಗೆ ಅರ್ಹತೆ ಪಡೆಯಲು ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳಿಗಾಗಿ 10 ದಿನಗಳ ವಿಶೇಷ ಕಾರ್ಯಾಗಾರವನ್ನು ಮಂಡ್ಯದ ಕಲಾಮಂದಿರ ಬಳಿ ಇರುವ ಜೆಪಿ ಸ್ಮಾರಕ ವಿದ್ಯಾ ಸಂಸ್ಥೆಯ ಹೊಂಬೇಗೌಡ ಸ್ಮಾರಕ ಕಾನೂನು ಕಟ್ಟಡದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಮುಖ್ಯಸ್ಥೆ ಬಿ. ಎಸ್ ಅನುಪಮ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾರ್ಯಾಗಾರದಲ್ಲಿ ಪರಿಣಿತರಿಂದ ವಿಶೇಷ ತರಬೇತಿ ಕೊಡಿಸಲಾಗುವುದು. ಮೊದಲನೇ ಬ್ಯಾಚ್ ಜೂನ್ 30 ರಿಂದ ಆರಂಭವಾಗಲಿದ್ದು, ಎರಡನೇ ಬ್ಯಾಚ್ ಜುಲೈ ೩ ರಂದು ನಡೆಯಲಿದೆ ಎಂದರು. ರಾಜ್ಯದಲ್ಲಿ ಮತ್ತೆ ಜುಲೈ 1ರಿಂದ ವಿದ್ಯುತ್ ದರ ಏರಿಕೆ

ಕೃಷಿ ಕೋಟದಡಿ ಬಿವಿಎಸ್‌ಇ ವೆಟನರಿ, ಬಿಎಸ್‌ಇ ಅಗ್ರಿಕಲ್ಚರ್, ತೋಟಗಾರಿಕೆ, ರೇಷ್ಮೆ, ಮೀನುಗಾರಿಗೆ, ಅರಣ್ಯ, ಹಾಲುಸಂಸ್ಕರಣೆ, ಕೃಷಿಮಾರುಕಟ್ಟೆ ಸೇರಿದಂತೆ ಅನೇಕ ಪದವಿಗಳು ಬರಲಿದ್ದು, ಕಾರ್ಯಾಗಾರದ ಸದುಪಯೋಗವನ್ನು ಜಿಲ್ಲೆಯ ಕೃಷಿಕ ಮಕ್ಕಳು ಪಡೆಯಬೇಕು ಎಂದು ಮನವಿ ಮಾಡಿದರು. ವಿವಿಧ ಬ್ಯಾಂಕ್‌ಗಳ ಪರಿಶೀಲನಾ ಸಭೆ – ಕನ್ನಡದಲ್ಲಿ ಸಂವಹನ ನಡೆಸಬೇಕು – ಸುಮಲತಾ ಕರೆ

ಗೋಷ್ಟಿಯಲ್ಲಿ ಡಾ. ಪ್ರೇಮ, ಹೇಮಂತ್ ಕುಮಾರ್ ಭಾಗವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!