ರಾಜ್ಯದಲ್ಲಿ ಮತ್ತೆ ಜುಲೈ 1ರಿಂದ ವಿದ್ಯುತ್ ದರ ಏರಿಕೆ

Team Newsnap
1 Min Read
If the bill is not paid, the electricity will be cut! ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ !

ರಾಜ್ಯದ ಜನತೆಗೆ ಮತ್ತೊಂದು ಶಾಕ್ ಕಾದಿದೆ ಜುಲೈ 1 ರಿಂದ ರಾಜ್ಯದಲ್ಲಿ ವಿದ್ಯುತ್ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ತಿಂಗಳಿಗೆ 100 ಯುನಿಟ್ ಗಳನ್ನು ಬಳಸುವ ಗ್ರಾಹಕರು ಸರಬರಾಜು ಮಾಡುವ ಕಂಪನಿಗೆ ಅನುಗುಣವಾಗಿ ಹೆಚ್ಚುವರಿಯಾಗಿ 19 ರಿಂದ 31 ರು ಪಾವತಿಸಬೇಕಾಗುತ್ತದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) 2021-22 ರ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ಹೆಚ್ಚಿದ ಇಂಧನ ವೆಚ್ಚಕ್ಕಾಗಿ ಖರ್ಚು ಮಾಡಿದ ಹಣವನ್ನು ವಸೂಲು ಮಾಡಲು ವಿದ್ಯುತ್ ಸರಬರಾಜು ಮಾಡುವ ಕಂಪನಿಗಳು (ಎಸ್ಕಾಂಗಳು) ಮಾಡಿದ ಪ್ರಸ್ತಾಪವನ್ನು ಅನುಮೋದಿಸಿದೆ.

ಬೆಸ್ಕಾಂ ಗ್ರಾಹಕರು 31 ಪೈಸೆ/ ಯೂನಿಟ್, ಹೆಸ್ಕಾಂ 27, ಜೆಸ್ಕಾಂ 26, ಮೆಸ್ಕಾಂ 21, ಸೆಸ್ಕ್ 19 ಪೈಸೆ ಪಾವತಿಸಬೇಕಾಗುತ್ತದೆ.

ಮುಂದಿನ ವರ್ಷ ಕಾಮೆಡ್ ಕೆ ಪರೀಕ್ಷೆ ರದ್ದಿಗೆ ಸರ್ಕಾರ ನಿರ್ಧಾರ – ಭಾರೀ ವಿರೋಧ

ಪ್ರತಿ ಯೂನಿಟ್ ಗೆ 37 ಪೈಸೆಯಿಂದ 49 ಪೈಸೆವರೆಗೆ ಶಾಖೋತ್ಪನ್ನ ಕೇಂದ್ರಗಳ ವೇರಿಯಬಲ್ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ಕೆಇಆರ್ ಸಿ ತನ್ನ ಆದೇಶದಲ್ಲಿ ತಿಳಿಸಿದೆ. ಇದರ ಪರಿಣಾಮವಾಗಿ, ಎಸ್ಕಾಂಗಳು ಕೊಳ್ಳುವ ಶಕ್ತಿಯಲ್ಲಿ ಮಾಡುವ ಒಟ್ಟಾರೆ ವೆಚ್ಚವು ಯೂನಿಟ್ ಗೆ 29 ಪೈಸೆಯಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

Share This Article
Leave a comment