Ex CM BSY ವಿರುದ್ದ ಕ್ರಿಮಿನಲ್ ಕೇಸ್ ಹಾಕಲು ವಿಶೇಷ ಕೋರ್ಟ್ ಆದೇಶ- 2013 ರ ಪ್ರಕರಣಕ್ಕೆ ಮರು ಜೀವ

Team Newsnap
1 Min Read

2013 ರ ಡಿ ನೋಟಿಫೀಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಜಿ ಸಿಎಂ B S ಯಡಿಯೂರಪ್ಪನವರ ಪರವಾಗಿ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ನಿರಾಕರಿಸಿರುವ ವಿಶೇಷ ಕೋರ್ಟ್ , ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

BSY ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ರ ಸೆಕ್ಷನ್ 13(2) ಅಡಿಯಲ್ಲಿ ಓದಲಾದ ಸೆಕ್ಷನ್ 13(1) ಡಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ವಿಶೇಷ ಕ್ರಿಮಿನಲ್ ಕೇಸ್ ದಾಖಲಿಸುವಂತೆ ವಿಶೇಷ ನ್ಯಾಯಾಧೀಶ ಬಿ ಜಯಂತ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಬೆಳಂದೂರು ಬಳಿ 4.30 ಎಕರೆ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿದ ಪ್ರಕರಣ ಈಗ ಮತ್ತೆ ಟ್ವಿಸ್ಟ್ ಪಡೆದುಕೊಂಡಿದೆ.

2015 ರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯವು ತನಿಖೆಗೆ ಆದೇಶಿಸಲಾಗಿತ್ತು ಆದರೆ 2021 ರ ಜನವರಿಯಲ್ಲಿ ಬಿ ರಿಪೋರ್ಟ್ ಸಲ್ಲಿಸಿ ಆರೋಪಗಳು ನಿರರ್ಥಕ ಎಂದು ಹೇಳಲಾಗಿತ್ತು . ಆದರೆ ನ್ಯಾಯಾಲಯವು ಈ ವರದಿಯನ್ನು ತಿರಸ್ಕರಿಸಿ ತನಿಖೆಗೆ ಆದೇಶ ಮಾಡಿರುವುದರಿಂದ BSY ಗೆ ಮತ್ತೆ ಸಂಕಷ್ಟ ಎದುರಾಗಿದೆ.

Share This Article
Leave a comment