ಪೈಪಿನಲ್ಲಿ ಹಾವು ಸತ್ತರೂ, ಜನರಿಗೆ ಅದೇ ಕುಡಿಯುವ ನೀರು ಪೂರೈಕೆ –ಸಾರ್ವಜನಿಕರ ಆಕ್ರೋಶ

Team Newsnap
1 Min Read

ನೀರಿನ ಪೈಪಿಗೆ ಹಾವುಗಳು ಸಿಕ್ಜು ಸಾವನ್ನಪ್ಪಿದ್ದರೂ ಅದೇ ಪೈಪಿನಿಂದ ಕುಡಿಯೋಕೆ ನೀರನ್ನ ಪೂರೈಸುವ ಗ್ರಾಮ ಪಂಚಾಯ್ತಿ ವಿರುದ್ಧ ಸ್ಥಳಿಯರು ಆಕ್ರೋಶ ಹೊರ ಹಾಕಿರುವ ಘಟನೆ ಜರುಗಿದೆ.

ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೋನುಗೂಡು ಗ್ರಾಮಕ್ಕೆ ಈ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಹಳ್ಳಕ್ಕೆ ಮೋಟಾರ್ ಹಾಕಿದ್ದಾರೆ. ಆಗಾಗ್ಗೆ ಹಾವುಗಳು ಮೋಟರ್ ನ ಕೆಲ ಭಾಗಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ. ಇಂತಹ ನೀರನ್ನು ಕುಡಿದು ಊರಿನ ಜನ ನಾನಾ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ‌ ಎಂಬುದು ಸಾರ್ವಜನಿಕರ ದೂರು.

ಹಳ್ಳವನ್ನು ಸ್ವಚ್ಛ ಮಾಡಿ ಇದಕ್ಕೆ ಶಾಶ್ವತ ಪರಿಹಾರ ಮಾಡಿ ಎಂದು ಪಂಚಾಯ್ತಿ ಗಮನಕ್ಕೆ ತಂದರೂ ಅಧಿಕಾರಿಗಳು ಹಾಗೂ ಸದಸ್ಯರು ಯಾವುದೇ ಕ್ರಮ ಕೈಗೊಳ್ಳದೆ ಕುಡಿಯಲು ಅದೇ ನೀರನ್ನ ಪೂರೈಸುತ್ತಿದ್ದಾರೆಂದು ಸ್ಥಳೀಯರು ಹಾಗೂ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a comment