ಗೋವಾ ಹೈದ್ರಾಬಾದ್ ಸ್ಪೈಸ್ ಜೆಟ್ ನಲ್ಲಿ ಕಾಣಿಸಿಕೊಂಡ ಹೊಗೆ : ತುರ್ತು ಭೂಸ್ಪರ್ಶ

Team Newsnap
1 Min Read
Smoke seen at Goa Hyderabad Spice Jet: Emergency landing ಗೋವಾ ಹೈದ್ರಾಬಾದ್ ಸ್ಪೈಸ್ ಜೆಟ್ ನಲ್ಲಿ ಕಾಣಿಸಿಕೊಂಡ ಹೊಗೆ : ತುರ್ತು ಭೂಸ್ಪರ್ಶ

ಗೋವಾದಿಂದ ಹೈದರಾಬಾದ್ ಗೆ ಪ್ರಯಾಣಿಕರನ್ನು ಕರೆದು ತರುತ್ತಿದ್ದ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಗೋವಾದಿಂದ ಹೈದರಾಬಾದ್ ಗೆ ಬುಧವಾರ ರಾತ್ರಿ ಹೊರಟ SG 3735 ಸ್ಪೈಸ್ ಜೆಟ್ ವಿಮಾನದ ಕಾಕ್ ಪಿಟ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಕೂಡಲೇ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದೆ.ಹಿಜಾಬ್ ಮೇಲ್ಮನವಿ : ಸುಪ್ರೀಂನಿಂದ ವಿಭಜಿತ ತೀರ್ಪು – ಅರ್ಜಿ ಈಗ CJ ಅಂಗಳಕ್ಕೆ

ವಿಮಾನದಲ್ಲಿ ಉಂಟಾದ ತಾಂತ್ರಿಕ ಅವಘಡದ ಬಗ್ಗೆ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ಒಟ್ಟು 86 ಪ್ರಯಾಣಿಕರಿದ್ದು ಎಲ್ಲಾ ಪ್ರಯಾಣಿಕರು ಅಪಾಯವಿಲ್ಲದೆ ಪಾರಾಗಿದ್ದಾರೆ.

ವಿಮಾನ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಕೆಲವು ವಿಮಾನಗಳು ಬೇರೆ ರನ್ ವೇ ಮೂಲಕ ಸಂಚರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a comment