ಇವತ್ತಿನ ದಿನದಲ್ಲಿ ಫೋನ್ ಇಲ್ಲದೇ ಯಾವುದೇ ವ್ಯಕ್ತಿ ಕೆಲಸ ನಿರ್ವಹಿಸಲು ಸಾಧ್ಯವೇ?ಇಲ್ಲ ಎಂಬಂತಾಗಿದೆ ಇವತ್ತಿನ ಪರಿಸ್ಥಿತಿ. ಯಾವುದೇ ವ್ಯಕ್ತಿ ಮೊಬೈಲ್ ಫೋನ್ ಇಲ್ಲದೇ ಬದುಕನ್ನು ಊಹಿಸಿಕೊಳ್ಳುವದೇ ಕಷ್ಟವಾಗಿದೆ. ಇಂದು ಮಾನವನ ಪ್ರತಿಯೊoದು ಕಾರ್ಯವೂ ಸ್ಮಾರ್ಟ್ ಫೋನ್ ಗಳ ಮೇಲೆ ಅವಲಂಬಿತವಾಗಿದೆ. ಬೇರೆಲ್ಲವನ್ನೂ ಬಿಡಿ. ಈ ಲೇಖನವನ್ನು ನೀವುಗಳು ಓದುತ್ತಿರುವುದೂ ಸಹ ಮೊಬೈಲ್ ನಲ್ಲೇ ಅಲ್ಲವೇ? ಇವತ್ತಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಎಂಬುದು ಒಬ್ಬ ಮನುಷ್ಯನ ಜೀವನದಲ್ಲಿ ಎಷ್ಟು ಮುಖ್ಯ? ಅದರಿಂದ ಆಗುವ ಸಾಧಕ-ಭಾದಕಗಳೇನು? ಸಧ್ಯದಲ್ಲಿ ಸ್ಮಾರ್ಟ್ ಫೋನ್ ಗಳ ಮಾರಾಟ ಮಾರುಕಟ್ಟೆ ಹೇಗಿದೆ ಎಂಬುದರ ಬಗ್ಗೆ ಒಂದು ಚಿಕ್ಕ ಚರ್ಚೆ ಇಲ್ಲಿದೆ.
ನಮ್ಗೆಲ್ಲರಿಗೂ ಗೊತ್ತಿರುವ ಹಾಗೆ ಮೊಬೈಲ್ ಭಾರತ ದೇಶಕ್ಕೆ ಬಂದದ್ದು ಸುಮಾರು 2000 ನೇ ಇಸವಿಯ ಆಸುಪಾಸು. ಅಲ್ಲಿಂದ ಇಲ್ಲಿನವರೆಗೆ ಮೊಬೈಲ್ ಫೋನ್ ಗಳಲ್ಲಿ ಅನೇಕ ಬಾಲಾವಣೇಗಳಾಗಿವೆ. ಆದರೆ ಅಂದಿನಿಂದ ಇಂದಿನವರೆಗೆ ಬದಲಾವಣೆಯಾಗದೇ ಇರುವ ಒಂದೇ ಒಂದು ಸಂಗತಿಯೆಂದರೆ ಫೋನನ್ನು ಬಳಸಬಯಸುವ ಗ್ರಾಹಕ. ಮೊಬೈಲ್ ಫೋನ್ ಗಳು ಮಾರುಕಟ್ಟೆಗೆ ಬಂದ ಮೇಲೆ ಯಾರೂ ಸಹ ಅದರ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಕಾರಣ ಅದರ ಬಗೆಗಿನ ತಿಳುವಳಿಕೆಯ ಕೊರತೆ ಹಾಗೂ ಅದನ್ನು ಕೊಳ್ಳಲು ಬೇಕಾದ ಹಣದ ಮೌಲ್ಯವೂ ಇರಬಹುದು. ಆದರೆ ಈಗ ಪ್ರತಿಯೊಬ್ಬರ ಹತ್ತಿರವೂ ಮೊಬೈಲ್ ಗಳು ಅದರಲ್ಲೂ ಅತ್ಯಾಧುನಿಕ ಸ್ಮಾರ್ಟ್ ಪೋನ್ ಗಳಿವೆ. ಆವಾಗಿಂತಲೂ ಇವುಗಳ ಬೆಲೆ ಈಗ ಬಹಳ ಕಡಿಮೆ – ಆಪಲ್ ಬ್ರ್ಯಾಂಡ್ ಒಂದನ್ನ ಹೊರತು ಪಡಿಸಿ.
ಬದಲಾವಣೆಯಾಗದ ಇನ್ನೂ ಒಂದು ಸಂಗತಿಯಿದೆ. ಅದೆಂದರೆ ಈ ಮೊಬೈಲ್ ಫೋನ್ ಗಳ ಬಳಕೆಯಿಂದ ಪರಿಸರದಲ್ಲಾಗುತ್ತಿರುವ ಏರು ಪೇರಿನ ಬಗ್ಗೆ ಪರಿಸರ ತಜ್ಜರು, ಸಂಶೋಧಕರು ಜೀವ ವೈವಿಧ್ಯತೆಯ ನಾಶ, ಪರಿಸರ ನಾಶದ ಬಗ್ಗೆ ಎತ್ತುತ್ತಿರುವ ಧ್ವನಿ. ಮೊಬೈಲ್ ನ ತರಂಗಾಂತರಗಳು ಒಂದು ನಿರ್ಧಿಷ್ಠ ಟವರ್ ನ ಮೂಲಕ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರಿಂದ ಗುಬ್ಬಚ್ಚಿ ಹಾಗೂ ಇನ್ನೂ ಅನೇಕ ಪಕ್ಷಿಗಳು ನಾಶ ಹೊಂದುತ್ತವೆ ಎಂಬುದು ಸಹ ಗೊತ್ತಿರುವ ಸಂಗತಿಯೇ? ಆದರೆ ಇದರಿಂದ ಪರಿಸರ ನಾಶ ಹೇಗಾಗುತ್ತದೆ? ಅದಕ್ಕೆ ಇಲ್ಲಿದೆ ಉತ್ತರ. ಯಾವುದೇ ಪಕ್ಷಿಯ ಕಣ್ಣುಗಳು ಅತಂತ ಸೂಕ್ಷ್ಮ ದೃಷ್ಠಿಯನ್ನು ಹೊಂದಿರುತ್ತದೆ. ಮನುಷ್ಯನ ದೃಷ್ಠಿಯ ಸ್ಪಷ್ಟತೆ ಅಥವಾ ರೆಸ್ಯುಲೂಷನ್ ಸುಮಾರು 576 ಮೆಗಾ ಪಿಕ್ಸೆಲ್ ಗಳಿಗಿಂತಲೂ ಹೆಚ್ಚಿದ್ದರೆ, ಪಕ್ಷಿಯ ದೃಷ್ಠಿಯ ಸ್ಪಷ್ಟತೆ ಅಥವಾ ರೆಸ್ಯುಲೂಷನ್ ಮನುಷ್ಯನ ಕಣ್ಣಿನ ಸ್ಪಷ್ಟತೆಗಿಂತಲೂ 4-8 ಪಟ್ಟು ಹೆಚ್ಚ್ಚಿರುತ್ತದೆ. ಇದರಿಂದ ಗದ್ದೆ, ಹೊಲಗಳಲ್ಲಿ ಬೆಳೆಗೆ ಮಾರಕವಾಗ ಕ್ರಿಮಿ, ಕೀಟಗಳನ್ನು ಅವು ಹುಡುಕಿ-ಹುಡುಕಿ ತಿನ್ನುತ್ತವೆ. ಒಂದು ರೀತಿಯಲ್ಲಿ ರೈತ್ನ ಮಿತ್ರರಿದ್ದಂತೆ. ಯಾವುದೇ ಸಂಭಾವನೆಯನ್ನೂ ತೆಗೆದುಕೊಳ್ಳದೇ ರೈತನಿಗೆ ಅವು ಸಹಾಯ ಮಾಡುತ್ತವೆ. ಈಗಾಗಲೇ ರೈತ ಕಷ್ಟದಲ್ಲಿದ್ದಾನೆ. ಅವನನ್ನು ಇನ್ನೂ ಕಷ್ಟಕ್ಕೆ ತಳ್ಳುವುದು ಬೇಡ. ಆದರೆ ಇನ್ನು ಕೆಲ ಪ್ರಾಣಿಗಳ ವಿಷಯದಲ್ಲೂ ಸಹ ಅಷ್ಟೇ. ಮೊಬೈಲ್ ನ ತರಂಗಾಂತರಗಳು ಅವುಗಳ ಚಿತ್ತವನ್ನು ಕೆರಳಿಸುವ ಕೆಲಸ ಮಾಡುತ್ತವೆ. ಇದರಿಂದ ಅವುಗಳು ತಮಗೆ ಹಾನಿ ಮಾಡೀಕೊಳ್ಳುವದಲ್ಲದೇ ತಮ್ಮ ಸಂಕುಲಕ್ಕೂ ಹಾನಿ ಮಾಡುತ್ತವೆ. ಹೀಗೆ ಯಾವುದೇ ಒಂದು ಪ್ರಾಣಿ ಪ್ರಕೃತಿಯಲ್ಲಿ ನಶಿಸುವುದರಿಂದ ಪರಿಸರ ಅಸಮತೋಲನ ಉಂಟಾಗುತ್ತದೆ. ಜೊತೆಗೆ ತರಂಗಾಂತರದ ಇತರೆ ಪರಿಣಾಮಗಳೆಂದರೆ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುವುದು, ಜಾಗತಿಕ ತಾಪಮಾನ ಹೆಚ್ಚಗುವಿಕೆ ಇನ್ನೂ ಮುಂತಾದವುಗಳಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತವೆ.
ಇನ್ನು ಇವತ್ತಿನ ಸ್ಮಾರ್ಟ್ ಪೋನ್ ಪ್ರಪಂಚದಲ್ಲಿ ಅವುಗಳ ಅಸ್ತಿತ್ವ ಎಷ್ಟು ಮಹತ್ವ ಪಡೆದುಕೊಂಡಿದೆ ಎಂದು ಈ ಕೆಳಗಿನ ಅಂಶಗಳ ಆಧಾರದಲ್ಲಿ ನೋಡೋಣ.
- ಆಧುನಿಕ ಫೋನ್ ಗಳು ಮಾರುಕಟ್ಟೆಗೆ ಬಂದಿರುವದರಿಂದ ಪ್ರಪಂಚದ ಯಾವುದೇ ಮಾಹಿತಿಯು ಕ್ಷಣಾರ್ಧದಲ್ಲೇ ಬಳಕೆದಾರರ ಕೈ ಸೇರುತ್ತದೆ.
- ಸ್ಮಾರ್ಟ್ ಫೋನ್ ಗಳ ಲಭ್ಯತೆಯಿಂದ ಇಂದು ಯಾವುದೇ ವ್ಯಕ್ತಿಯು ಯವುದೇ ರೀತಿಯ ಸರ್ಕಾರಿ ಪ್ರಮಾಣ ಪತ್ರಗಳನ್ನು ನಿಂತ ಸ್ಥಳದಲ್ಲೇ ಪಡೆದುಕೊಳ್ಳಬಹುದಾಗಿದೆ. ಇಂದು ಸರ್ಕಾರವೂ ಸಹ ಆನ್ ಲೈನ್ ಸೇವೆಗಳನ್ನು ಆರಂಭಿಸಿದ್ದು ಈ ಸೇವೆಗಳ ಮುಖಾಂತರ ಯಾವುದೇ ನಾಗರೀಕನು ಮೊದನಲಿಂತೆ ಅನೇಕ ಗಂಟೆಗಳ ಕಾಲ ಸರತಿಯಲ್ಲಿ ನಿಂತು ಪ್ರಮಾಣ ಪತ್ರಗಳಿಗೆ ಅರ್ಜಿಯನ್ನು ಹಾಕಲೇಬೇಕೆಂಬ ಗೊಡವೆಯಿಲ್ಲ.
- ಇಂದಿನ ದಿನಗಳಲ್ಲಿ ಶಿಕ್ಷಣವನ್ನೂ ಸಹ ಆನ್ ಲೈನ್ ನಲ್ಲಿ ಕೊಡಲಾಗುತ್ತಿದೆ. ಕೋವಿಡ್ ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾರ್ಟ್ ಪೋನ್, ಲ್ಯಾಪ್ ಟಪ್ ಗಳ ಬಳಕೆ ಹೆಚ್ಚಿದೆ.
- ಮನರಂಜನೆಯ ಅತ್ಯುತ್ತಮ ಸಾಧನವಾಗಿ ಸ್ಮಾರ್ಟ್ ಪೋನ್ ಗುರುತಿಸಿಕೊಂಡಿದೆ.
- ಅನೇಕ ನಿರುದ್ಯೋಗಿಗಳು ಸ್ಮಾರ್ಟ್ ಫೋನ್ ಮುಖಾಂತರವೇ ತಮ್ಮ ಆದಾಯವನ್ನು, ಅಂದರೆ ಆನ್ ಲೈನ್ ಕೆಲಸಗಳ ಮುಖಾಂತರ ತಮ್ಮ ಆದಾಯವನ್ನು ಗಳಿಸಿಕೊಳ್ಳುತ್ತಿದ್ದಾರೆ.
- ಮೇಲಿನ ಅಂಶಗಳಲ್ಲದೇ, ಊಟ-ತಿಂಡಿಯನ್ನು ಬುಕ್ ಮಾಡಲು, ಮನೆಗೆ ಅವಶ್ಯಕವಾಗಿರುವ ದಿನಸಿಗಳನ್ನು ಆರ್ಡರ್ ಮಾಡಲು, ಯಾವುದೇ ಕಾರ್ಯಕ್ರಮಗಳ ಟಿಕೇಟ್ ಗಳನ್ನು ಕೊಳ್ಳಲು, ಇನ್ನೂ ಅನೇಕ ಸೇವೆಗಳಿಗೆ ಇಂದು ಸ್ಮಾರ್ಟ್ ಫೋನ್ ಗಳು ಸಹಾಯಕವಾಗಿವೆ.
ಇಂದು ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಯಾವ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಎಂದು ಕೆಳಗಿನ ಅಂಶಗಳ ಮುಖಾಂತರ ನೋಡೋಣ.
ಸ್ಮಾರ್ಟ್ ಫೋನ್ ಸೇಲ್ ಅಂಕಿ ಅಂಶಗಳು
ಸ್ಟ್ಯಾಟಿಸ್ಟಾ ಎಂಬ ಆನ್ ಲೈನ್ ಪೋರ್ಟಲ್ 2016 ರಿಂದ 2020 ರವರೆಗಿನ ಸಮೀಕ್ಷೆಯೊಂದನ್ನು ಮಾಡಿದೆ. ಅದರ ಪ್ರಕಾರ ಮಾರಾಟವಾಗಿರುವ ಒಟ್ಟು ಸ್ಮಾರ್ಟ್ ಫೋನ್ ಗಳ ಸಂಖ್ಯೆ ಈ ಕೆಳಗಿನಂತಿದೆ.
- 2016 ರಲ್ಲಿ 250 ಕೋಟಿ ಸ್ಮಾರ್ಟ್ ಫೋನ್ ಗಳು ಪ್ರಪಂಚದಾದ್ಯಂತ ಮಾರಾಟವಾಗಿವೆ.
- 2017 ರಲ್ಲಿ 270 ಕೋಟಿ,
- 2018 ರಲ್ಲಿ 290 ಕೋಟಿ,
- 2019 ರಲ್ಲಿ 320 ಕೋಟಿ
- 2020 (ಸೆಪ್ಟೆಂಬರ್ ತಿಂಗಳವರೆಗೆ) ರಲ್ಲಿ 350 ಕೋಟಿ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿವೆ.
ಈ ಪೋರ್ಟಲ್ ಒಂದು ಹೆಜ್ಜೆ ಮುಂದೆ ಹೋಗಿ 2021ರ ಅಂದಾಜು ಮಾರಾಟವನ್ನೂ ಸಮೀಕ್ಷಿಸಿದೆ. 2021ರ ಅಮ್ಡಾಜು ಮಾರಾಟ 380 ಕೋಟಿ ಇರಬಹುದೆಂದು ಅದು ಹೇಳಿದೆ.
ಕೌಂಟರ್ ಪಾಯಿಂಟ್ ರೀಸರ್ಚ್ ಜಾಲತಾಣವು 2018 ರಿಂದ 2020 ರ ವರೆಗೆ ಪ್ರತೀ ಮೂರು ತಿಂಗಳಲ್ಲಿ ಮಾರಾಟವಾದ ಸ್ಮಾರ್ಟ್ ಫೋನ್ ಗಳ ಅಂಕಿ ಅಂಶಗಳನ್ನು ಪ್ರಕಟಿಸಿದೆ. ಅವುಗಳ ಅಂಕಿ ಅಂಶ ಈ ಕೆಳಗಿದೆ.
2018
- ಹುವಾವೇ – 2018 ರ ಪ್ರತಿ ಮೂರು ತಿಂಗಳಿಗೆ ಕ್ರಮವಾಗಿ 11%, 15%, 14%, 15% ರಷ್ಟು ಮಾರಾಟವಾಗಿವೆ.
- ಸ್ಯಾಮ್ ಸಂಗ್ – 2018ರ ಪ್ರತಿ ಮೂರು ತಿಂಗಳಲ್ಲಿ 22%, 19%, 19%, 18%,
- ಆಪಲ್ – 2018 ರ ಪ್ರತೀ ಮೂರು ತಿಂಗಳಲ್ಲಿ 14%, 11%, 12%, 17%,
- ಷಿಯಾಮಿ – 8%, 9%, 9%, 6%,
- ವಿವೊ – 5%, 7%, 8%, 7%,
- ಒಪ್ಪೋ – 7%, 8%, 9%, 8%, ಫೋನ್ ಗಳು ಮಾರಾಟವಾಗಿವೆ.
2019ರ ಪ್ರತೀ ಮೂರು ತಿಂಗಳಲ್ಲಿ,
- ಹುವಾವೇ – 17%, 16%, 18%, 14%
- ಸ್ಯಾಮ್ ಸಂಗ್ – 21%, 21%, 21%, 18%
- ಆಪಲ್ – 12%, 10%, 12%, 18%
- ಷಿಯಾಮಿ – 8%, 9%, 8%, 8%,
- ವಿವೊ – 7%, 8%, 8%, 8%,
- ಒಪ್ಪೋ – 8%, 9%, 9%, 8% ರಷ್ಟು ಫೋನ್ ಗಳು ಮಾರಾಟವಾಗಿವೆ.
2020ರ ಎರಡು ತ್ರೈಮಾಸಿಕಗಳಲ್ಲಿ ( ಜನವರಿಯಿಂದ ಜೂನ್ ವರೆಗೆ)
- ಹುವಾವೇ – 17%, 20%
- ಸ್ಯಾಮ್ ಸಂಗ್ – 20% 20%
- ಆಪಲ್ – 14%, 14%
- ಷಿಯಾಮಿ – 10%, 10%
- ವಿವೊ – 7%, 8%,
- ಒಪ್ಪೋ – 8%, 9%, ರಷ್ಟು ಫೋನ್ ಗಳು ಮಾರಾಟವಾಗಿವೆ.
ಇದು 2016 ರಿಂದ 2020ರ ವರೆಗಿನ ಸ್ಮಾರ್ಟ್ ಫೋನ್ ಮಾರಾಟದ ಒಂದು ಪಕ್ಷಿ ನೋಟ. ಈ ಅಂಕಿ ಅಂಶಗಳು ಕೇವಲ ಸಮೀಕ್ಷೆಗೆ ಸಿಕ್ಕಿದ ವಿವರಗಳು. ಇನ್ನೂ ಬೇರೆ ಬೇರೆ ರೀತಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿವೆ.
ಒಟ್ಟಿನಲ್ಲಿ ಸ್ಮಾರ್ಟ್ ಫೋನ್ ಗಳನ್ನು ಬಳಸುವಿಕೆಯು ಅವಶ್ಯಕತೆಯ ಜೊತೆಗೆ ಪ್ರತಿಷ್ಠೆಯ ಸಂಕೇತವೂ ಆಗಿರುವಂತೆ ತೋರುತ್ತದೆ. ಹಾಗಾಗಿಯೇ ಕೆಲವೊಬ್ಬರು ಎರೆಡೆರಡು ಫೋನ್ ಗಳನ್ನು ಇಟ್ಟುಕೊಂಡಿರುತ್ತಾರೆ. ಅದರೆ ಸ್ಮಾರ್ಟ್ ಫೋನ್ ಗಳ ಅವಶ್ಯಕತೆ ಮತ್ತು ಅನುಕೂಲ ಎಷ್ಟಿದಿಯೋ ಅಷ್ಟೆ ಅನಾನುಕೂಲ ಮತ್ತು ತೊದರೆಗಳೂ ಇವೆ.ಪರಿಸರ ರಕ್ಷಣೆಯ ದೃಷ್ಠಿಯಿಂದ ಇವುಗಳ ಬಳಕೆ ನಿಷಿದ್ಧ ಎನ್ನಿಸಿದರೂ ಇಂದಿನ ಸ್ಪರ್ಧೆಯ ಜಗತ್ತಿನಲ್ಲಿ ಇವುಗಳ ಪಾತ್ರವನ್ನು ನಾವು ಕಡೆಗಣಿಸಲಾಗದು. ಆದರೆ ಸ್ಪರ್ಧೆಯ ಭರದಲ್ಲಿ ನಾವು, ನಮ್ಮಂತೆಯೇ ಬದುಕಲು ಹಕ್ಕಿರುವ ಇನ್ನೊಂದು ಜೀವದ ಬಗೆಗೆ ಮಾತ್ರ ಮರೆಯಬಾರದು. ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದೆ. ಅವುಗಳನ್ನು ಬದುಕಲು ಬಿಡಬೇಕು. ಈಗಾಗಲೇ 5ಜಿ ತರಂಗಾಂತರದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಮುಂದೆ ಪರಿಸ್ಥಿತಿ ಇನ್ನೂ ದಾರುಣವಾಗಿ ಬದಲಾಗುವ ಸಾಧ್ಯತೆ ಇದೆ. ಮೊನ್ನೆ ತಾನೇ ವ್ಯಕ್ತಿಯೊಬ್ಬನ ಜೇಬಿನಲ್ಲಿದ್ದ ಷಿಯಾಮಿ ಮೊಬೈಲ್ ಸ್ಪೋಟಗೊಂಡು ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಮುಂದೆ ಇಂತಹ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಬಹುದು. ಹಾಗೆಂದು ಸ್ಮಾರ್ಟ್ ಫೋನ್ ಗಳನ್ನೇ ನಾನು ಬೇಡವೆನ್ನುತ್ತಿಲ್ಲ. ಆದರೆ ಎಷ್ಟು ಅವಶ್ಯಕವೋ ಅಷ್ಟು ಮಾತ್ರ ಈ ಫೋನ್ ಗಳನ್ನ ಬಳಸಿದರೆ ನಮ್ಮ ಆರೋಗ್ಯಕ್ಕೂ ಅನುಕೂಲ. ಪರಿಸರಕ್ಕೂ ಅನುಕೂಲ. ಇದನ್ನೇ ತಾನೇ ಸುಸ್ಥಿರ ಅಭಿವೃದ್ಧಿ ಎನ್ನುತ್ತಾರೆ? ಜೀವ ವೈವಿಧ್ಯತೆ ಕಾಪಾಡುವುದು, ಪರಿಸರ ರಕ್ಷಿಸುವುದು ನಮ್ಮ ಹೊಣೆಯಲ್ಲವೇ?
Good report about smartphone.
Tq