ಸಿದ್ದರಾಮಯ್ಯ ಮನೆಯಲ್ಲಿ ಸೂತಕ : ಕಳಚಿದ ಸಂಭ್ರಮ

Team Newsnap
0 Min Read

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನ ಸಹೋದರಿ ಶಿವಮ್ಮ‌ ಅವರ ಪತಿ ರಾಮೇಗೌಡ (69) ಶನಿವಾರ‌ ನಿಧನ‌ರಾದರು.

ರಾಮೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಳಿಗ್ಗೆ ನಗರದ ಜೆಎಸ್ ಎಸ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು.ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಕೊನೆಯುಸಿರೆಳೆದರು.

ಮೃತರು ಸಿದ್ದರಾಮನಹುಂಡಿಯಲ್ಲಿ ನ್ಯಾಯಬೆಲೆ ಅಂಗಡಿ‌ ನಡೆಸುತ್ತಿದ್ದರು. ಮೃತರಿಗೆ ಪತ್ನಿ, ಮೂವರು ಹೆಣ್ಣು, ಒಂದು ಗಂಡು‌ಮಗ ಇದ್ದಾರೆ.

ಮಧ್ಯಾಹ್ನದ ನಂತರ, ಹುಟ್ಟೂರಿನಲ್ಲಿ ಅಂತ್ಯಕ್ರಿಯೆ‌ ನೆರವೇರಿತು.ಕುರುಡು ಕಾಂಚಾಣ ಕುಣಿಯುತಲಿತ್ತು….

ಸಿದ್ದರಾಮಯ್ಯ ವರುಣಾದಲ್ಲಿ ಭಾರಿ ಸಾಧಿಸಿದರೂ ಮನೆಯಲ್ಲಿ ಸೂತಕದ ಛಾಯೆ ಇರುವುದರಿಂದ ಸಂಭ್ರಮ ಪಡದ ವಾತಾವರಣ ಇದೆ.

Share This Article
Leave a comment