ಕುರುಡು ಕಾಂಚಾಣ ಕುಣಿಯುತಲಿತ್ತು….

Team Newsnap
1 Min Read

ಈ ಬಾರಿ ಚುನಾವಣೆ ಸಂಪೂರ್ಣ ಕಾಂಚಾಣದ ಕಾರ್ಯ ಸಿದ್ದಿಯಲ್ಲೇ ನಡೆಯಿತು. ಪಕ್ಷದ ಯಾವುದೇ ಅಭ್ಯರ್ಥಿ ಇರಲಿ ಹಣ ಚೆಲ್ಲದೇ ಮತ ಗಳಿಸುವುದು ಮತ್ತು ಗೆಲ್ಲುವುದು ಅಸಾಧ್ಯ ಎಂಬ ವಾತಾವರಣ ಸೃಷ್ಠಿಯಾಗಿತ್ತು.

ಶತಾಯ – ಗತಾಯ ಗೆಲ್ಲಲೇ ಬೇಕು ಎಂದು ಅಭ್ಯರ್ಥಿಗಳು ಕೋಟಿ ಗಟ್ಟಲೆ ಹಣ ಸುರಿದಿದ್ದಾರೆ. ಕಾಂಗ್ರೆಸ್ , ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಶಕ್ತಿ ಮೀರಿ ಹಣ ಸುರಿದರೂ ಕಾಂಗ್ರೆಸ್ ನ ವರು ನೀಡಿದ ಗ್ಯಾರೆಂಟಿ ಕಾರ್ಡ್ ನ ಭರವಸೆ ಮುಂದೆ ಎಲ್ಲವೂ ಗೌಣವಾಗಿ ಹೋದವು. ಬಿಜೆಪಿ ಧೂಳಿಪಟ: ಎಲೆಯಂತೆ ಉದುರಿದ ದಳ

ಈ ಚುನಾವಣೆಯಲ್ಲಿ ಬಹುತೇಕ ಅಭ್ಯರ್ಥಿಗಳು ಪ್ರತಿ ಮತಕ್ಕೂ 500 ರುಗಳಿಂದ 2000 ಸಾವಿರ ರುಗಳ ತನಕ ನೀಡಿ ಮತಯಾಚನೆ ಮಾಡಿದರೂ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಮತದಾರರನ್ನು ಸೆಳೆದು ಬಿಟ್ಟಿತು. ಮತ ಭಿಕ್ಷೆಗಾಗಿ ನೀಡಿದ ಹಣ ಹೊಳೆಯಂತೆ ಹರಿದು ಹೋಯಿತು. ಹಣ ಕೊಟ್ಟು ಸೋತ ಅಭ್ಯರ್ಥಿಗಳು ಮಾತ್ರ ನಡು ನೀರಿನ ಮುಳುಗಿ ಹೋದರು. ಕುರುಡು ಕಾಂಚಾಣ ಮಾತ್ರ ಬಹುತೇಕ ಮತದಾರರ ಮನೆಯಲ್ಲಿ ಕುಣಿಯುತ್ತಲೇ ಇತ್ತು.

Share This Article
Leave a comment