ಘರ್ಷಣೆಯಲ್ಲಿ ಗಾಯಗೊಂಡ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಲು ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದರು. ಸಿದ್ದು ಕೊಟ್ಟ 2 ಲಕ್ಷ ಪರಿಹಾರದ ಹಣವನ್ನು ಅವರ ಮೇಲೆಯೇ ಎಸೆದ ಮುಸ್ಲಿಂ ಮಹಿಳೆ!
ಸಿದ್ದರಾಮಯ್ಯ ನಮ್ಮ ಭೇಟಿಗೆ ಬರುತ್ತಿದ್ದಾರೆ ಎಂಬ ವಿಚಾರ ತಿಳಿದ ಹಿಂದೂ ಸಂಘಟನೆಯ ಗಾಯಾಳುಗಳು ನಮ್ಮನ್ನು ನೋಡಲು ಸಿದ್ದರಾಮಯ್ಯ ಬರುವುದು ಬೇಡ ಎಂದು ಬಾಗಲಕೋಟೆ ಎಸ್‌ಪಿಗೆ ಫೋನ್ ಮಾಡಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಭೇಟಿಯನ್ನು ಸಿದ್ದರಾಮಯ್ಯ ರದ್ದು ಮಾಡಿದ್ದರು ಇದನ್ನು ಓದಿ –ಪಡಿತರ ಚೀಟಿದಾರರಿಗೆ ಶೀಘ್ರವೇ ರಾಗಿ, ಜೋಳ ವಿತರಣೆ ಸ್ಥಗಿತ
ಜುಲೈ 6 ರಂದು ಕೆರೂರು ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ, ಚಾಕು ಇರಿತ ನಡೆದಿತ್ತು. ಚಾಕು ಇರಿತದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರ ಗಾಯಗೊಂಡಿದ್ದರು.
ಘರ್ಷಣೆ ಬಳಿಕ ಮನೆಯ ಮೇಲೆ ದಾಳಿ ಹಾಗೂ ಜುಲೈ 8 ರಂದು ಡಾಬಾ ಮೇಲೆ ದಾಳಿ ನಡೆದು ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಘಟನೆಯಲ್ಲಿ ಐವರು ಮುಸ್ಲಿಮರು ಗಾಯಗೊಂಡಿದ್ದರು. ಇಂದು ಎರಡು ಗುಂಪಿನ ಗಾಯಾಳುಗಳ ಭೇಟಿಗೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಮುಂದಾಗಿದ್ದರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ