ನಮಗೆ ಗುಲಾಮಗಿರಿ ಮನಸ್ಥಿತಿ ಇನ್ನೂ ಹೋಗಿಲ್ಲ. ಇದೇ ಗುಲಾಮಗಿರಿ ಮನಸ್ಥಿತಿ. ಈ ಗುಲಾಮಗಿರಿ ಮನಸ್ಥಿತಿ ಹೋಗಬೇಕು . ಶಿಕ್ಷಣ, ಅಧಿಕಾರ ಯಾವುದೇ ಒಂದು ಜಾತಿಯ ಸ್ವತ್ತಲ್ಲ. ಅವಕಾಶ ಸಿಕ್ಕರೆ ಎಲ್ಲ ಪ್ರತಿಭೆಗಳು ಹುಟ್ಟಿಕೊಳ್ತಾರೆ. ಯಾರು ಸಮಾಜದಲ್ಲಿ ಅಸಮಾನತೆ ಸೃಷ್ಟಿ ಮಾಡಿದ್ದಾರೋ ಅವರೇ ಮೀಸಲಾತಿ ಪ್ರಶ್ನೆ ಮಾಡ್ತಾರೆ. ಎಷ್ಟು ದಿನ ಬೇಕು ಮೀಸಲಾತಿ? ಇನ್ನೂ ಏಕೆ ಬೇಕು ಮೀಸಲಾತಿ ಅಂತಾ ಪ್ರಶ್ನೆ ಮಾಡ್ತಾರೆ.ಇದನ್ನು ಓದಿ –ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ : ಬಸವರಾಜ ಹೊರಟ್ಟಿ
ನಾಲ್ಕು ವರ್ಣದ ಪೈಕಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಶಿಕ್ಷಣ, ಅಧಿಕಾರ ಎನ್ನುವಂತಿತ್ತು. ಇದು ಮೀಸಲಾತಿ ಅಲ್ಲವಾ? ಇದೊಂದು ರೀತಿ ಅಲಿಖಿತ ಮೀಸಲಾತಿ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಬ್ರಾಹ್ಮಣರು ಮಾತ್ರ ಓದಬೇಕಿತ್ತು, ಬ್ರಾಹ್ಮಣರು ಮಾತ್ರ ಅಧಿಕಾರ ಹೊಂದಬೇಕಿತ್ತು. ಇದು ಮೀಸಲಾತಿ ಅಲ್ವಾ? ಕೊಳಕು ಕೆಲಸ ಬಿಟ್ಟು ಅವರು ಮಜಾ ಮಾಡ್ತಿದ್ದರುಇದು ಅಲಿಖಿತ ಮೀಸಲಾತಿ. ಏಕೆ ಮೀಸಲಾತಿ ಕೊಡಬೇಕು. ಮೀಸಲಾತಿ ಎಷ್ಟು ವರ್ಷ ಇರಬೇಕು, ಪ್ರತಿಭೆಗಳಿಗೆ ತೊಂದರೆ ಆಗೋದಿಲ್ಲವಾ ಎಂದು ಪ್ರಶ್ನೆ ಮಾಡ್ತಾರೆ. ಸಮಾಜದಲ್ಲಿ ಅಸಮಾನತೆ ಉಂಟಾಗಲು ಕಾರಣರಾದವರೇ ಈಗ ಪ್ರಶ್ನೆ ಕೇಳ್ತಿರೋದು ಎಂದು ಮೀಸಲಾತಿ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಆರ್ಯರು ವಲಸೆ ಬಂದರು ಅಂದ್ರೆ ಎಲ್ಲ ನನ್ನ ಮೇಲೆ ಬೀಳ್ತಾರೆ. ದ್ರಾವಿಡರ ಮೇಲೆ ದಬ್ಬಾಳಿಕೆ ಮಾಡಿದ್ರು ಅಂದ್ರೆ ಕೋಪ ಬಂದು ಬಿಡುತ್ತೆ ಅವರಿಗೆ. ನನ್ನ ಮೇಲೆ ಮುಗಿ ಬಿದ್ದುಬಿಡ್ತಾರೆ. ಮಿಲ್ಲರ್ ಆಯೋಗವನ್ನು ವಿರೋಧ ಮಾಡಿದವರು ಯಾರು? ಆ ಸತ್ತ ವ್ಯಕ್ತಿ ಹೇಳಿದ್ರೆ ನಮ್ಮ ಮೇಲೆ ಬರ್ತಾರೆ. ನಾನು ಒಬ್ಬ ಮಾತಾಡಿದರೆ ಅವರು 20 ಜನ ಬರ್ತಾರೆ. ನಮ್ಮವರೂ ಒಬ್ಬರೂ ಮಾತಾಡಲ್ಲ, ಸುಮ್ಮನೇ ಇರ್ತಾರೆ. ಸಿದ್ದರಾಮಯ್ಯ ತಾನೇ ಬೈಯ್ಯಿಸ್ಕೊಳ್ಳೋದು ಬಿಡು ಅಂತಾ ಸುಮ್ಮನಾಗ್ತಾರೆ ಎಂದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು