ನನಗೆ ಮುಸ್ಲಿಮರ ಮತ ಬೇಡ, ಅವರನ್ನು ಕೇಳೋದೆ ಇಲ್ಲ: ಕೆ.ಎಸ್.ಈಶ್ವರಪ್ಪ

Team Newsnap
1 Min Read
I dont want Muslim vote, I will not ask them to vote: KS Eshwarappa #thenewsnap #latestnews #karnataka_politics #Mandya #bengaluru #BJP #JDS #Kumarswamy #NEWS #Mysuru

ಹೆಚ್.ಡಿ.ಕುಮಾರಸ್ವಾಮಿ ಆರ್‌ಎಸ್‌ಎಸ್ ಟೀಕಿಸಿದರೆ ಮುಸ್ಲಿಂ ಓಟು ಬರುತ್ತದೆ ಅಂದುಕೊಂಡಿದ್ದಾರೆ. ಆದರೆ ನನಗೆ ಮುಸ್ಲಿಮರ ವೋಟು ಬೇಡ. ನಾನು ಅವರನ್ನು ಕೇಳೋದೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಆರ್‌ಎಸ್‌ಎಸ್ ಅವರಿಗೂ 40 ಪರ್ಸೆಂಟೇಜ್ ಕಮಿಷನ್ ಹೋಗುತ್ತದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.ಇದನ್ನು ಓದಿ –ಬ್ರಾಹ್ಮಣ ಅಡುಗೆ ಭಟ್ಟನಿಗೆ ನಮಸ್ಕಾರ ಎನ್ನುವ ಹಿಂದುಳಿದವನು ಶ್ರೀಮಂತನಾಗಿದ್ದರೂ ಏನ್ಲಾ ಅಂತಾರೆ: ಸಿದ್ದು

ಆರ್‌ಎಸ್‌ಎಸ್ ಟೀಕಿಸಿದರೆ ಸ್ವರ್ಗಕ್ಕೆ ಹೋಗ್ತೀವಿ ಅಂದುಕೊಂಡಿದ್ದಾರೆ. ಮುಸ್ಲಿಮರ ವೋಟು ಬರುತ್ತದೆ ಅಂದುಕೊಂಡಿದ್ದಾರೆ. ನೀವು ಮುಸಲ್ಮಾನರ ವೋಟು ತೆಗೆದುಕೊಳ್ಳಿ, ಬೇಡ ಅನ್ನೋದಿಲ್ಲ. ಆದರೆ ನನಗಂತೂ ಮುಸ್ಲಿಮರ ವೋಟು ಬೇಡ. ಈ ಹಿಂದೆಯೂ ನಾನು ಅವರ ವೋಟು ಕೇಳಿಲ್ಲ, ಕೇಳುವುದೂ ಇಲ್ಲ. ಆದರೂ ಮುಸ್ಲಿಂ ಸಮುದಾಯ ಇರುವ 60 ಬೂತ್‌ಗಳಲ್ಲಿ ನನಗೆ ಮೂರುವರೆ ಸಾವಿರ ವೋಟು ಬಂದಿದೆ ಎಂದಿದ್ದಾರೆ.

ಆರ್‌ಎಸ್‌ಎಸ್ ಬೈಯ್ಯದಿದ್ದರೆ ಕೆಲವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಮೊದಲು ಸಿದ್ದರಾಮಯ್ಯ ಆರ್‌ಎಸ್‌ಎಸ್‌ಗೆ ಬೈಯ್ಯುತ್ತಿದ್ದರು. ಈಗ ಕುಮಾರಸ್ವಾಮಿ ಅವರಿಗೂ ಆ ಚಾಳಿ ಬಂದಿದೆ. ಆರ್‌ಎಸ್‌ಎಸ್ ಟೀಕಿಸಿದರೆ ಮುಸ್ಲಿಮರ ವೋಟು ಬರುತ್ತದೆ ಎನ್ನುವುದು ಅವರ ಭಾವನೆ ಎಂದು ಕುಟುಕಿದ್ದಾರೆ.

Share This Article
Leave a comment