ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ : ಬಸವರಾಜ ಹೊರಟ್ಟಿ

Team Newsnap
1 Min Read
Separate State division is Stupidity: Basavaraja Horatti #thenewsnap #kannada_news #manyda #latestnews #karnataka #karnataka_politics #bengaluru #mysuru #NEWS

ಕರ್ನಾಟಕದ ಏಕೀಕರಣದ ಉದ್ದೇಶವೇ ಅಖಂಡ ಕರ್ನಾಟಕದ ಆಶಯ. ಅದು ಬಿಟ್ಟು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದು ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬಲವಾದ ಮಾತಿನಲ್ಲಿ ತಿವಿದರು.

ರಾಜ್ಯದಲ್ಲಿ ನಡೆಯುತ್ತಿರುವ ವಿವಾದಗಳ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಹೊರಟ್ಟಿ ಪ್ರತ್ಯೇಕ ರಾಜ್ಯ ಕೇಳುವುದೇ ಮೂರ್ಖತನದ ಮಾತು. ಕರ್ನಾಟಕ ಏಕೀಕರಣದಲ್ಲಿ ನಡೆದ ಹೋರಾಟ ನೆನಪಿಸಿಕೊಳ್ಳಲಿ. ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದು ಕೇಳಿಕೊಂಡರು.ಇದನ್ನು ಓದಿ –ಮಹಾರಾಷ್ಟ್ರ ರೆಬೆಲ್ ಶಾಸಕರಿಗೆ Y+ ಭದ್ರತೆ ನೀಡಿದ ಕೇಂದ್ರ ಸರ್ಕಾರ

ಬಿಜೆಪಿಯಲ್ಲಿ ಯಾರು ಖಂಡಿಸುತ್ತಾರೋ, ಇಲ್ಲವೋ ನಂಗೆ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದವನಾಗಿ ಹೇಳುತ್ತಿದ್ದೇನೆ, ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ. ಏಕೀಕರಣ ಹೋರಾಟದ ಉದ್ದೇಶ ಸಹಬಾಳ್ವೆ. ಏಕೀಕರಣ ಉದ್ದೇಶ ಮರೆತು ಮಾತನಾಡುವುದು ಸರಿಯಲ್ಲ
ಎಂದರು.

ಉಮೇಶ್ ಕತ್ತಿ 2009ರಲ್ಲಿ ಹೀಗೆಯೇ ಹೇಳಿದ್ದರು. ನನ್ನ ಮಗ ಮುಖ್ಯಮಂತ್ರಿ ಆಗ್ತಾನೆ ಅಂತ ಹೇಳಿದ್ದರು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಸರ್ಕಾರಕ್ಕೆ ಕೇಳೋಣ, ಅನ್ಯಾಯ ಸರಿಪಡಿಸಲು ಕೇಳೋಣ ಎಂದರು.

Share This Article
Leave a comment