ಸಿದ್ದರಾಮಯ್ಯ ನನಗೆ ಸಹಕಾರ ಕೊಡುತ್ತಾರೆ : ಸಿಎಂ ಆಗುವ ವಿಶ್ವಾಸ – ಡಿ ಕೆ ಶಿ

Team Newsnap
1 Min Read
Siddaramaiah will help me : Confidence to become CM - DK Shi ಸಿದ್ದರಾಮಯ್ಯ ನನಗೆ ಸಹಕಾರ ಕೊಡುತ್ತಾರೆ : ಸಿಎಂ ಆಗುವ ವಿಶ್ವಾಸ - ಡಿ ಕೆ ಶಿ

ನಾನು ಸೋತು ಸಿದ್ದರಾಮಯ್ಯರಿಗೆ ಅಂದು ಸಹಕಾರ ಕೊಟ್ಟಿದ್ದೇನೆ. ಅವರೂ ಸಹಕಾರ ಕೊಡುವ ವಿಶ್ವಾಸ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.

ಅಜ್ಜಯ್ಯನ ದರ್ಶನದ ಬಳಿಕ ಮಾತನಾಡಿದ ಅವರು, ಕೆಲವರು ನನಗೆ ಸಿದ್ದರಾಮಯ್ಯರ ನಡುವೆ ವ್ಯತ್ಯಾಸ ಇದೆ ಎಂದು ಹೇಳುತ್ತಾರೆ ಆದರೆ ನಮ್ಮಿಬ್ಬಿರ ನಡುವೆ ವ್ಯತ್ಯಾಸ ಇಲ್ಲ. ಹಲವು ಬಾರಿ ಪಕ್ಷದ ವಿಚಾರದಲ್ಲಿ ನಾನು ಸೋತಿದ್ದೇನೆ. ಆರಂಭದಲ್ಲಿ ನನ್ನನ್ನು ಮಂತ್ರಿ ಮಾಡದೇ ಇದ್ದಾಗ ನಾನು ತಾಳ್ಮೆಯಿಂದ ಇರಲಿಲ್ವಾ.

ಸಿದ್ದರಾಮಯ್ಯರಿಗೆ ನಾನು ಸಾಕಾರ ಕೊಟ್ಟಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರು ತಮಗೆ ಅವಕಾಶ ಕಲ್ಪಿಸಿಕೊಡುವಂತೆ ಹೇಳಿದರು.

ನನಗೆ ಮಾನಸಿಕವಾಗಿ ಧೈರ್ಯ ಕೊಟ್ಟವರು ಅಜ್ಜಯ್ಯನವ್ರು. ನಾನು 134 ಸೀಟು ಕೇಳ್ಕೊಂಡಿದ್ದೆ. ಯಾರ ಹಂಗಿನಲ್ಲೂ ನಾವು ಅಧಿಕಾರ ಮಾಡಬಾರದು ಅಂತಾ ಬೇಡ್ಕೊಂಡಿದ್ದೆ.

ನಾನು ಅಧಿಕಾರ ಹಿಡಿದಾಗಲೇ, ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡ್ಬೇಕು ಅನ್ನೋ ಮಾರ್ಗದರ್ಶನ ಬಂದಿತ್ತು. ‘ಶರ್ಟ್ ಬಟನ್ ಹಾಕಿ’ ಮಂಡ್ಯ ಶಾಸಕ ರವಿಗೆ ಚುಂಚನಗಿರಿ ಶ್ರೀಗಳ ಶಿಸ್ತಿನ ಪಾಠ

ಹೀಗಾಗಿಯೇ ನಾವು ಗೃಹಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡೋ ಯೋಜನೆ ಮಾಡಿದೆವು ಎಂದು ತಿಳಿಸಿದರು.

Share This Article
Leave a comment