‘ಶರ್ಟ್ ಬಟನ್ ಹಾಕಿ’ ಮಂಡ್ಯ ಶಾಸಕ ರವಿಗೆ ಚುಂಚನಗಿರಿ ಶ್ರೀಗಳ ಶಿಸ್ತಿನ ಪಾಠ

Team Newsnap
1 Min Read
Mandya MLA Ravi's discipline lesson from Chunchanagiri shri 'ಶರ್ಟ್ ಬಟನ್ ಹಾಕಿ' ಮಂಡ್ಯ ಶಾಸಕ ರವಿಗೆ ಚುಂಚನಗಿರಿ ಶ್ರೀಗಳ ಶಿಸ್ತಿನ ಪಾಠ

ಶರ್ಟ್‌ ಬಟನ್ ‌ಹಾಕಿ ಶಿಸ್ತಿನಿಂದ ನಡೆದುಕೊಳ್ಳಿ. ನೀವು ಈಗ ಶಾಸಕರು ಎಂದು ಮಂಡ್ಯ ಕ್ಷೇತ್ರ ನೂತನ ಶಾಸಕ ರವಿ ಗಣಿಗಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಶಿಸ್ತಿನ ಪಾಠ ಹೇಳಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಇಂದು ಆದಿಚುಂಚನಗಿರಿ ಮಠಕ್ಕೆ ಮಂಡ್ಯ ಕಾಂಗ್ರೆಸ್ ಶಾಸಕ ಭೇಟಿ ನೀಡಿದರು.

ಪೂಜೆ ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು.
ಮಾತುಕತೆ ವೇಳೆ ಮಂಡ್ಯ ಶಾಸಕ ರವಿಕುಮಾರ್ ಶರ್ಟ್ ಬಟನ್ ಹಾಕಿಲ್ಲದಿರುವುದನ್ನು ಶ್ರೀಗಳು ಗಮನಿಸಿದರು.

ಶರ್ಟ್‌ ಬಟನ್‌ ಹಾಕುವಂತೆ ಸೂಚಿಸಿ ಕಾಂಗ್ರೆಸ್‌ ಶಾಸಕನಿಗೆ ಶಿಸ್ತಿನ ಪಾಠ ಹೇಳಿದರು.

WhatsApp Image 2023 05 14 at 12.41.35 PM

ನೀನಿಗ ಶಾಸಕ, ಹೀಗೆಲ್ಲಾ ಓಡಾಡಬಾರದು. ಮೊದಲು ಶರ್ಟ್ ಬಟನ್ ಹಾಕಿ ಎಂದು ತಿಳಿಸಿದರು.ರಾಜ್ಯ DGP ಪ್ರವೀಣ್ ಸೂದ್ ಸಿಬಿಐ ನಿರ್ದೇಶಕ ಹುದ್ದೆಗೆ ನೇಮಕ ?

ಶ್ರೀಗಳ ಶಿಸ್ತಿನ ಪಾಠದ ಬೆನ್ನಲ್ಲೇ ಎಚ್ಚೆತ್ತ ಶಾಸಕ ಗಣಿಗ ರವಿಕುಮಾರ್ ಶರ್ಟ್ ಬಟನ್ ಹಾಕಿಕೊಂಡರು.

Share This Article
Leave a comment