March 31, 2023

Newsnap Kannada

The World at your finger tips!

politics,election,congress

Siddu tried to slap a Congress worker ಕಾಂಗ್ರೆಸ್ ಕಾರ್ಯಕರ್ತನ ಕಪಾಳಮೋಕ್ಷಕ್ಕೆ ಯತ್ನಿಸಿದ ಸಿದ್ದು

ನವೆಂಬರ್ 13 ಕ್ಕೆ ಸಿದ್ದರಾಮಯ್ಯ ಕ್ಷೇತ್ರ ಪ್ರಕಟ ಸಾಧ್ಯತೆ.

Spread the love

ಮುಂದಿನ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ನವೆಂಬರ್ 13 ಕ್ಕೆ ಈ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಆಪ್ತ ಮುಖಂಡರು ಕೂಡ, ನಮ್ಮಲ್ಲಿ ಬನ್ನಿ ಎಂದು ಆಹ್ವಾನ ನೀಡುವ ಮೂಲಕ ಸ್ವತಃ ಸಿದ್ದರಾಮಯ್ಯರಲ್ಲಿ ಗೊಂದಲ ಮೂಡಿಸ್ತಿದ್ದಾರೆ. ಇದು ಹೀಗೆ ಮುಂದುವರೆದರೆ ತಪ್ಪು ಸಂದೇಶ ಹೋಗಬಹುದು ಎಂಬ ಕಾರಣಕ್ಕೆ, ಇದಕ್ಕೆಲ್ಲಾ ಪೂರ್ಣವಿರಾಮ ಇಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ.ಪಂಜಾಬ್​​ನಲ್ಲಿ ಶಿವಸೇನೆ ನಾಯಕ ಸುಧೀರ್ ಗುಂಡಿಟ್ಟು ಹತ್ಯೆ

ತಾವು ಸ್ಪರ್ಧೆ ಮಾಡಲಿರುವ ಕ್ಷೇತ್ರ ಯಾವುದು ಎಂಬುದನ್ನು ಸಿದ್ದರಾಮಯ್ಯ ನ.13ರಂದು ಪ್ರಕಟ ಮಾಡಬಹುದು ಎಂಬ ವದಂತಿ ಇದೆ. ಕೋಲಾರದ ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿ, ತಮ್ಮ ಕ್ಷೇತ್ರವನ್ನು ಸಿದ್ದರಾಮಯ್ಯ ಘೋಷಣೆ ಮಾಡಬಹುದು ಎನ್ನಲಾಗಿದೆ.

ಟಿಪ್ಪು ಜಯಂತಿ ಮಡಿದ ಕಾರಣಕ್ಕೆ ಸಿದ್ದರಾಮಯ್ಯಗೆ ಕ್ಷೇತ್ರ ಸಿಗ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಟೀಕಿಸಿದ್ದಾರೆ. ತಾಕತ್ತಿದ್ದರೆ ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಿ ಗೆಲ್ಲಿ ಎಂದು ಸವಾಲ್ ಹಾಕಿದ್ದಾರೆ.

ಸಿದ್ದರಾಮಯ್ಯ ಆಯ್ಕೆಯ ಕ್ಷೇತ್ರಗಳು

ಕ್ಷೇತ್ರ 1 – ವರುಣಾ,
ಕ್ಷೇತ್ರ 2 – ಕೋಲಾರ,
ಕ್ಷೇತ್ರ 3 – ಬಾದಾಮಿ,
ಕ್ಷೇತ್ರ 4 – ಚಾಮರಾಜಪೇಟೆ.

error: Content is protected !!