ಪಂಜಾಬ್​​ನಲ್ಲಿ ಶಿವಸೇನೆ ನಾಯಕ ಸುಧೀರ್ ಗುಂಡಿಟ್ಟು ಹತ್ಯೆ

Team Newsnap
1 Min Read
Shiv Sena leader Sudhir shot dead in Punjab ಪಂಜಾಬ್​​ನಲ್ಲಿ ಶಿವಸೇನೆ ನಾಯಕ ಸುಧೀರ್ ಗುಂಡಿಟ್ಟು ಹತ್ಯೆ

ಪಂಜಾಬ್​​ನ ಅಮೃತಸರದ ದೇವಸ್ಥಾನವೊಂದರ ಸಮೀಪ ಶಿವಸೇನೆ ನಾಯಕ ಸುಧೀರ್​​​ ಸೂರಿ ಎಂಬುವರಿಗೆ ಗುಂಡಿಟ್ಟು ಕೊಲ್ಲಲಾಗಿದೆ.

ಹಾಡಹಗಲೇ ನಡೆದ ಈ ಭೀಕರ ಕೊಲೆಗೆ ಇಡೀ ಅಮೃತಸರ ನಗರ ಬೆಚ್ಚಿಬಿದ್ದಿದೆ. ಶುಕ್ರವಾರ ಶಿವಸೇನೆ ನಾಯಕರು ಅಮೃತಸರದ ದೇವಸ್ಥಾನದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು. ಬೆಂಗಳೂರಿಲ್ಲಿ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು

ದೇವಸ್ಥಾನದ ಹೊರಗೆ ಮುರಿದ ದೇವರ ಮೂರ್ತಿಗಳು, ಹರಿದು ಹೋದ ದೇವರ ಫೋಟೋಗಳು ಬಿದ್ದಿದ್ದವು. ಇದನ್ನು ಖಂಡಿಸಿ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಶಿವಸೇನೆ ನಾಯಕರು ಪ್ರತಿಭಟನೆ ಮಾಡುತ್ತಿದ್ದರು.

ಪ್ರತಿಭಟನೆಯಲ್ಲಿ ನಾಯಕ ಸುಧೀರ್​​ ಸೂರಿ ಕೂಡ ಭಾಗಿಯಾಗಿದ್ದರು. ಆಗ ಅಲ್ಲೇ ದೇವಸ್ಥಾನದ ಮುಂದೆ ನೆರೆದಿದ್ದ ಜನರ ಮಧ್ಯದಿಂದ ಏಕಾಏಕಿ ವ್ಯಕ್ತಿಯೋರ್ವ ಸುಧೀರ್​ ಸೂರಿಯವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಸುಧೀರ್​​​ ಹತ್ಯೆಯಾಗಿದ್ದಾರೆ.

Share This Article
Leave a comment