September 27, 2022

Newsnap Kannada

The World at your finger tips!

politics,election,congress

No Flower Garland: Siddaramaiah Against Activists ಹೂವಿನ ಹಾರ ಬೇಡ : ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಗರಂ #Thenewsnap #Latestnews #Siddu #Congress #Ex_CM #Karnataka_politics #Siddharamaiah #India #bengaluru #NEWS #Mandya_News #Mysuru

81 ವರ್ಷದ ನಂತರ ಕೋಲು ಹಿಡಿದು ರಾಜಕಾರಣ ಮಾಡುವುದಿಲ್ಲ -ಸಿದ್ದು

Spread the love

ಇದೇ ನನ್ನ ಕೊನೆಯ ಚುನಾವಣೆ ,ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕಳೆದ 40 ವರ್ಷ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ ಮುಂದೆಯೂ ಸಹ ಮಾಡುತ್ತೇನೆ ಎಂದಿದ್ದಾರೆ.ಇದನ್ನು ಓದಿ –ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕರ್ನಾಟಕ ಭಕ್ತರಿಗೆ ಸರ್ಕಾರದಿಂದ ಸಹಾಯವಾಣಿ

ನನ್ನ ಐದು ವರ್ಷ ಆಡಳಿತದ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ ಸಹಾಯ ಮಾಡಿದ್ದೇನೆ.ಕೊಳ್ಳೇಗಾಲದ ಬಸ್ತಿಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಅವಧಿ ಪೂರ್ಣಗೊಂಡಾಗ ನನಗೆ 81 ವರ್ಷ ಆಗುತ್ತದೆ.

ಇದು ನನ್ನ ಕೊನೆಯ ಚುನಾವಣೆ. ನನ್ನ ಮಗ ಈಗಾಗಲೇ ರಾಜಕೀಯಕ್ಕೆ ಪ್ರವೇಶಿಸಿ ಶಾಸಕನೂ ಆಗಿದ್ದಾನೆ.ದಲಿತರು, ನಾಯಕರು ಹಾಗೂ ಕುರುಬ ಜನಾಂಗದವರು ಒಟ್ಟಾಗಿ ಸೇರಿ ಈ ಹಬ್ಬ ಮಾಡುತ್ತಿರುವುದರಿಂದ ಇಲ್ಲಿಗೆ ಬಂದಿದ್ದೇನೆ.

ರಾಜಕೀಯ ಎಂದರೆ ಅಧಿಕಾರ ಪಡೆದು ಹಣ ಮಾಡುವುದಲ್ಲ, ಮಜಾ ಮಾಡುವುದಲ್ಲ, ನಾಡಿನ ಜನರ ಸೇವೆಯನ್ನು ಮಾಡುವುದು ಎಂದರು.

error: Content is protected !!