ಸಿದ್ದಗಂಗಾ ಮಠ – 5 ಕೋಟಿ ಮೌಲ್ಯದ ಥೀಮ್ ಪಾರ್ಕ್ ನಿರ್ಮಾಣ

Team Newsnap
1 Min Read

ತುಮಕೂರು : ಸಿದ್ದಗಂಗಾ ಮಠದಲ್ಲಿ 60 ಎಕರೆ ವಿಸ್ತೀರ್ಣದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ (Theme Park) ಸಿದ್ಧಗೊಳ್ಳುತ್ತಿದೆ.

ಸಿದ್ದಗಂಗಾ ಮಠ ಬೆಳೆದು ಬಂದ ಸಮಗ್ರ ಇತಿಹಾಸ ಮತ್ತು ಶಿವಕುಮಾರ ಶ್ರೀಗಳ ಜೀವನ ಚರಿತೆಯನ್ನು ಹೇಳುವ ಕಲಾಕೃತಿಗಳನ್ನು ಒಳಗೊಂಡಿದ್ದು, ಪಾರ್ಕ್‌ನಲ್ಲಿ 100ಕ್ಕೂ ಹೆಚ್ಚು ಶಿಲ್ಪಗಳ ನಿರ್ಮಾಣವನ್ನು ಮಾಡಲಾಗುತ್ತಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದ್ದು, ಉದ್ಯಾನವನದಲ್ಲಿ 10 ಜನ ಕಲಾವಿದರು ಹಗಲು ರಾತ್ರಿ ಈ ಕಾರ್ಯದಲ್ಲಿ ಶ್ರಮಿಸುತಿದ್ದಾರೆ. ನಾಳೆಯಿಂದ ನಂದಿನಿ ಹಾಲಿನ ದರ ಹೆಚ್ಚಳ: ಯಾವುದರ ಬೆಲೆ ಎಷ್ಟು ?

60 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸಿದ್ದಲಿಂಗೇಶ್ವರರು, ಅಟವಿ ಶ್ರೀಗಳು, ಉದ್ಧಾನ ಶಿವಯೋಗಿಗಳು, ಡಾ.ಶ್ರೀ.ಶಿವಕುಮಾರ ಸ್ವಾಮೀಜಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶಿಲ್ಪಗಳು ಗಮನ ಸೆಳೆದರೆ ಇನ್ನೊಂದೆಡೆ ಡಾ.ಶಿವಕುಮಾರ ಸ್ವಾಮೀಜಿ ಅವರ ಬಾಲ್ಯ, ವಿದ್ಯಾಭ್ಯಾಸ, ಸನ್ಯಾಸತ್ವ ದೀಕ್ಷೆ, ಜೀವನ ಸಾಧನೆ ಸಾರುವ ಪ್ರತಿಯೊಂದು ಸಾಧನೆಗಳ ಹೂರಣವೇ ಇಲ್ಲಿ ಶಿಲ್ಪ ಕಲೆಯಾಗಿ ಹೊರ ಹೊಮ್ಮಿದೆ.

#SIDDAGANGA #Siddagangathemepark #siddagangaswamiji #tumukuru #tumukuruthemepark #kannadanews #newsnap #bestkannadanews #mandya #mysore #bengluru #karnataka

Share This Article
Leave a comment