ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ತರಕಾರಿ ಬೆಲೆ ಗಗನಕ್ಕೇರಿದೆ. ಟೊಮೆಟೋ ದರ 100ರೂ ಗಡಿದಾಟಿದೆ. ಹೀಗಿರುವಾಗ ರಾಜ್ಯದ ಜನತೆಗೆ ಮತ್ತೊಂದು ಶಾಕ್ , ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.3 ಹೆಚ್ಚಳ ಮಾಡಲಾಗಿದೆ.
ಜುಲೈ 21ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆ ನಡೆಸಿ, ಈ ಸಭೆಯಲ್ಲಿ ಹಾಲು ಒಕ್ಕೂಟಗಳು ನೀಡಿರುವ ನಂದಿನಿ ದರ 5 ರೂ ಹೆಚ್ಚಳ ಪ್ರಸ್ತಾನೆಯ ಬಗ್ಗೆ ಮಹತ್ವದ ಚರ್ಚೆಯನ್ನು ನಡೆಸಿದರು. ಅಲ್ಲದೇ ನಂದಿನಿ ಹಾಲಿನ ಪುಡಿಯ ದರವನ್ನು ಹೆಚ್ಚಳದ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಅಂತಿಮವಾಗಿ ಸಿಎಂ ನೇತೃತ್ವದ ಸಭೆಯಲ್ಲಿ ನಂದಿನಿ ಹಾಲಿನ ಪ್ರತಿ ಲೀಟರ್ ದರವನ್ನು ರೂ.3 ಹೆಚ್ಚಳ ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ.
ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, KMF ನಿರ್ದೇಶಕ ಹೆಚ್.ಡಿ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಲೂರು ಶಾಸಕ ನಂಜೇಗೌಡರು ಮತ್ತಿತರರು ಭಾಗವಹಿಸಿದ್ದರು. SSLC’, ‘ITI’ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ : 1,016 ಹುದ್ದೆಗಳಿಗೆ ಅರ್ಜಿ
ಯಾವುದರ ಬೆಲೆ ಎಷ್ಟು ಹೆಚ್ಚಳ ಮಾಹಿತಿ
- ನಂದಿನಿ( ಟೋನ್ಡ್ ಹಾಲು) ಅರ್ಧ ಲೀಟರ್‌ಗೆ 23 ಹಾಗೂ ಒಂದು ಲೀಟರ್‌ಗೆ 43 ರೂ. ಆಗಲಿದೆ.
- ನಂದಿನಿ (ಡಬಲ್ ಟೋನ್ಡ್ ಹಾಲು) ಅರ್ಧ ಲೀಟರ್‌ಗೆ 22 ಹಾಗೂ ಒಂದು ಲೀಟರ್‌ಗೆ 41 ರೂಪಾಯಿ ಆಗಲಿದೆ.
- ನಂದಿನಿ ಶುಭಂ ಅರ್ಧ ಲೀಟರ್‌ಗೆ 26 ಹಾಗೂ ಒಂದು ಲೀಟರ್‌ಗೆ 48 ರೂ. ಆಗಲಿದೆ.
- ನಂದಿನಿ ಸ್ಪೆಷಲ್ ಅರ್ಧ ಲೀಟರ್‌ಗೆ 26 ಮತ್ತು ಒಂದು ಲೀಟರ್‌ಗೆ 48 ರೂ. ಆಗಲಿದೆ.
- ನಂದಿನಿ ( ಸಮೃದ್ಧಿ) ಅರ್ಧ ಲೀಟರ್‌ಗೆ 27 ಹಾಗೂ ಒಂದು ಲೀಟರ್‌ಗೆ 51 ರೂಪಾಯಿ ಆಗಲಿದೆ.
- ನಂದಿನಿ ಹಸುವಿನ ಹಾಲು ಅರ್ಧ ಲೀಟರ್‌ಗೆ 25 ಹಾಗೂ ಒಂದು ಲೀಟರ್‌ಗೆ 54 ರೂಪಾಯಿ.
- ವಂಚನೆ ಆರೋಪ: ಮಂಡ್ಯದಲ್ಲಿ ಐಶ್ವರ್ಯಗೌಡ ವಿರುದ್ಧ ಮತ್ತೊಂದು FIR ದಾಖಲು
- ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ (ಐಕ್ಯಾಟ್) ಸ್ಥಾಪನೆ ಖಚಿತ
- ಬೆಂಗಳೂರು: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ – ಇಬ್ಬರು ಆರೋಪಿಗಳು ಬಂಧನ
- Mandya : KSRTC ಬಸ್ ಪಲ್ಟಿಯಾಗಿ 30 ಪ್ರಯಾಣಿಕರಿಗೆ ಗಾಯ
- ಪಿಎಂ ಜನ್ ಮನ್ ಯೋಜನೆಗೆ ಮಂಡ್ಯ ಪೂವನಹಳ್ಳಿ ಗ್ರಾಮ ಆಯ್ಕೆ
#NandiniMilk #Milkprice #Kannadanews #BestKannadanews #Mandya #mysore #bengaluru #Newsnap #karnataka
More Stories
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ (ಐಕ್ಯಾಟ್) ಸ್ಥಾಪನೆ ಖಚಿತ
ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಬಂಧನ: 48 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ
ಗಾಜಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಅಸ್ತು: ಭಾನುವಾರದಿಂದ ಜಾರಿಗೆ