ಸರಳ ವಾಸ್ತು ಗುರೂಜಿ ಹತ್ಯೆಗೆ ಅಣ್ಣನ ಮಕ್ಕಳ ಎಂಟ್ರಿಯೂ ಕಾರಣ : ವಾಟ್ಸಾಪ್ ಸಂದೇಶದಿಂದ ಬಹಿರಂಗ

Team Newsnap
1 Min Read
sibling's children's entry was also the reason for Sarla Vastu Guruji's murder: ಸರಳ ವಾಸ್ತು ಗುರೂಜಿ ಹತ್ಯೆಗೆ ಅಣ್ಣನ ಮಕ್ಕಳ ಎಂಟ್ರಿಯೂ ಕಾರಣ : ವಾಟ್ಸಾಪ್ ಸಂದೇಶದಿಂದ ಬಹಿರಂಗ

ಸರಳವಾಸ್ತು ಸಾಮಾಜ್ಯವನ್ನು ಕಟ್ಟಿ ಭೀಕರವಾಗಿ ಕೊಲೆಯಾದ ಚಂದ್ರಶೇಖರ್ ಗುರೂಜಿ ಕೇಸ್‌ಗೆ ಪರಿವಾರ ಗ್ರೂಪ್‌ಗೆ ಹುಳಿ ಹಿಂಡಿದವರು ಅವರ ಅಣ್ಣನ ಮಕ್ಕಳು ಎನ್ನುವ ಅಂಶ ಬಯಲಾಗಿದೆ.

ಸರಳವಾಸ್ತು ಚಂದ್ರಶೇಖರ್ ಗುರೂಜಿ ಆಪ್ತರಲ್ಲಿ ಮೂಡಿದ ಮನಸ್ತಾಪ. ಯಾವಾಗ ಅವರ ಅಣ್ಣನ ಮಕ್ಕಳು, ಗುರೂಜಿ ಕಂಪನಿಗೆ ಎಂಟ್ರಿ ಆದರೋ ಅಲ್ಲಿಂದ ಸಮಸ್ಯೆ ಶುರುವಾಗಿದೆ.ಇದನ್ನು ಓದಿ –ಬದುಕಿಗೊಂದು ದೀವಿಗೆ…. ಭಗವದ್ಗೀತೆ

2014ರ ನಂತರ ಗುರೂಜಿ ಸರಳವಾಸ್ತು ಕಂಪನಿಯಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಚಂದ್ರಶೇಖರ ಗುರೂಜಿ, ಸಿಬ್ಬಂದಿ ನಡುವೆ ಅಣ್ಣನ ಮಕ್ಕಳು ವಿಲನ್‌ಗಳಾಗುತ್ತಿದ್ದಾರೆ ಎಂದು ಹತ್ಯೆ ಆರೋಪಿ ಮಂಜುನಾಥ ಸ್ವತಃ ಗುರೂಜಿ ಮುಂದೆ ನೋವು ಹೇಳಿಕೊಂಡರು.

ಮಂಜುನಾಥ್ ಗುರೂಜಿಗೆ ವಾಟ್ಸಾಪ್ ಸಂದೇಶ ಒಂದನ್ನು ಕಳಿಸಿದ್ದರು ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೆ 2ನೇ ತಂದೆಯಾಗಿದ್ದೀರಿ. ನಿಮ್ಮ ಏಳಿಗೆಗಾಗಿ ನಾವು ಕಷ್ಟಪಟ್ಟು ದುಡಿದೆವು. ಆದರೆ ಯಾವಾಗ ನಿಮ್ಮ ಅಣ್ಣನ ಮಕ್ಕಳು ಕಂಪನಿಗೆ ಎಂಟ್ರಿ ಕೊಟ್ರೋ ಆಗ ಎಲ್ಲವೂ ಬದಲಾಯಿತು. ನೀವು ಸಿಬ್ಬಂದಿಯನ್ನು ಮಕ್ಕಳಂತೆ ಕಾಣುತ್ತಿದ್ದೀರಿ.

ಆದರೆ ನಿಮ್ಮ ಅಣ್ಣನ ಮಕ್ಕಳು ನಿಮ್ಮನ್ನು ಮತ್ತು ನಮ್ಮನ್ನು ಬೇರೆ ಮಾಡಲು ಶುರು ಪ್ರಯತ್ನಿಸಿದ್ದಾರೆ. ನಿಮ್ಮ ಅಣ್ಣನ ಮಕ್ಕಳು ಯಾವಾಗ ಕಂಪನಿಗೆ ಬಂದರೋ ಆಗ ನಿಮ್ಮ ಅವನತಿ ಆರಂಭವಾಯಿತು. ನೀವು ನಮ್ಮ ಪಾಲಿನ ದೇವರು ಅಂತ ತಿಳಿದುಕೊಂಡಿದ್ದೆವು. ಆದರೆ ನೀವು ನಮ್ಮ ಪಾಲಿನ ಯಮ ಆದಿರಿ.

ನಿಮಗೆ ನಾವು ಏನು ಮಾಡಿದ್ವಿ?

ನಮ್ಮ ಕಣ್ಣೀರು ನಿಮ್ಮನ್ನು ಕ್ಷಮಿಸೋದಿಲ್ಲ. 400 ಜನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರಿ. ಅವರ ಕಣ್ಣೀರು ಸುಮ್ಮನೆ ಬಿಡೋದಿಲ್ಲ. ಆದರೂ ನಿಮಗೆ ನಾವು ಒಳ್ಳೆಯದನ್ನೇ ಬಯಸುತ್ತೇವೆ ಎಂದು ಸಂದೇಶದಲ್ಲಿದೆ.

ಸಾಕಷ್ಟು ಮೆಸೇಜ್‌ಗಳು ಆರೋಪಿಗಳಿಂದ ಗುರೂಜಿಗೆ ಹೋಗಿವೆ. ಆದರೆ ಚಂದ್ರಶೇಖರ ಗುರೂಜಿ ಮಾತ್ರ ಇವುಗಳಿಗೆ ತಲೆಕೆಡಿಸಿಕೊಂಡಿಲ್ಲ. ಗುರೂಜಿ, ಸಿಬ್ಬಂದಿ ಮೇಲಿಟ್ಟಿದ್ದ ಕಾಳಜಿಯು ಅಣ್ಣನ ಮಕ್ಕಳು ಎಂಟ್ರಿ ಬಳಿಕ ಕಡಿಮೆಯಾಗಿದೆ. ಇದರಿಂದ ಹುಟ್ಟಿಕೊಂಡ ಮನಸ್ತಾಪ ಗುರೂಜಿ ಅಂತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Share This Article
Leave a comment