ನನ್ನ ಅವನು 420 ಎಂದು ಕರೆದರೆ ಅವನನ್ನು ಮದ್ದೂರು ತಾಲೂಕಿನಲ್ಲಿ 840 ಮತ್ತು ಟೋಕನ್ ಗಿರಾಕಿ ಎಂದು ಕರೆಯುತ್ತಾರೆ… ಜಿ.ಮಾದೇಗೌಡ ಪುತ್ರ ಮಧುಮಾದೇಗೌಡ ವಿರುದ್ಧ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವಾಗ್ದಾಳಿ ನಡೆಸಿದ ರೀತಿ ಇದು ಭಾನುವಾರ ಎಲ್.ಆರ್. ಶಿವರಾಮೇಗೌಡ ಜೆಡಿಎಸ್ ಕಾರ್ಯಕರ್ತೆಯೊಂದಿಗೆ ಮಾತನಾಡುವ ಆಡಿಯೋ ವೈರಲ್ ಆಗಿತ್ತು.
ಈ ಆಡಿಯೋದಲ್ಲಿ ಜಿ.ಮಾದೇಗೌಡ ವಿರುದ್ಧ ಶಿವರಾಮೇಗೌಡ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಧುಮಾದೇಗೌಡ ಶಿವರಾಮೇಗೌಡರನ್ನು 420 ಹಾಗೂ ಜೋಕರ್ ಎಂದು ಕರೆಯುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದರು.
ಆ ಹೇಳಿಕೆಗೆ ತಿರುಗೇಟು ಕೊಟ್ಟ ಶಿವರಾಮೇಗೌಡ, ಮಧುಮಾದೇಗೌಡರನ್ನು ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ 840 ಮತ್ತು ಟೋಕನ್ ಗಿರಾಕಿ ಎಂದು ಕರೆಯುತ್ತಾರೆ ಎಂದು ಟೀಕಿಸಿದರು.
ನಾನು ಮಾದೇಗೌಡರ ವಿರುದ್ಧ ಅವಹೇಳನವಾಗಿ ಏನು ಹೇಳಿಲ್ಲ, ಈ ಹಿಂದೆ ನನಗೆ ಮಾದೇಗೌಡರ ನಡುವೆ ನಡೆದ ಹೋರಾಟ ಘಟನಾವಳಿಯನ್ನು ಹೇಳಿದ್ದೇನೆ ಅಷ್ಟೇ. ಮಾದೇಗೌಡರ ಬಗ್ಗೆ ನನಗೆ ಗೌರವವಿದೆ. ಅದರ ಬಗ್ಗೆ ಯಾವುದೆ ಸಂದೇಹ ಬೇಡ. ನಾನು ಹೋರಾಟದಲ್ಲಿ ಮಾದೇಗೌಡರಿಗೆ ಹೆದರಿಕೊಂಡು ನಮ್ಮೂರಲ್ಲಿ ಕೂತಿಲ್ಲ, ಮಾದೇಗೌಡರ ವಿರುದ್ಧ ಗೆದ್ದು ಹೋರಾಟ ಮಾಡಿದ್ದೇನೆ ಎಂದು ಕಿಡಿಕಾರಿದರು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ