December 23, 2024

Newsnap Kannada

The World at your finger tips!

ukren rayabari

ಶಿವನಿಂದಲೇ ನಮ್ಮನ್ನು​​​​ ಕಾಪಾಡಲು ಸಾಧ್ಯ : ಪ್ರಾರ್ಥನೆ ಮಾಡಿ – ಉಕ್ರೇನ್​​ ರಾಯಭಾರಿ

Spread the love

ರಷ್ಯಾ ಮತ್ತು ಉಕ್ರೇನ್​​ ನಡುವಿನ ಯುದ್ಧ ತೀವ್ರಗೊಂಡ ಹಿನ್ನೆಲೆಯಲ್ಲಿ ಇಂದಿನ ಉಕ್ರೇನ್ ಭೀಕರ ಪರಿಸ್ಥಿತಿಯನ್ನು ತಿಳಿಗೊಳಿಸಲು ಶಿವನಿಂದ ಮಾತ್ರ ಸಾಧ್ಯ . ನಮ್ಮ ಪರವಾಗಿ ಎಲ್ಲಾ ಭಾರತೀಯರು ಪ್ರಾರ್ಥನೆ ಮಾಡಿ ಎಂದು ದೆಹಲಿಯಲ್ಲಿರುವ ಉಕ್ರೇನ್ ರಾಯಭಾರಿ ಇಗೋರ್ ಪೋಲಿಖಾ ಮನವಿ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಇಗೋರ್ ಪೋಲಿಖಾ, ಇಂದು ಮಹಾ ಶಿವರಾತ್ರಿ ಅನಿಸುತ್ತೆ. ರಷ್ಯಾದಿಂದ ಉಕ್ರೇನ್​ನನ್ನು ಕಾಪಾಡಲು ಶಿವನಿಂದ ಮಾತ್ರ ಸಾಧ್ಯ. ಎಲ್ಲಾ ಭಾರತೀಯರು ಉಕ್ರೇನ್​​ಗಾಗಿ ಶಿವನ ಪ್ರಾರ್ಥನೆ ಮಾಡಿ ಎಂದು ಮನವಿ ಮಾಡಿದರು.

ಉಕ್ರೇನ್ ರಾಯಭಾರಿ ಇಗೋರ್ ಪೋಲಿಖಾ ಈ ಮುನ್ನ ಪ್ರಧಾನಿ ನರೇಂದ್ರ ಮೋದಿಯವರಿಗೆ ರಷ್ಯಾ ಜತೆ ಮಾತಾಡುವಂತೆ ಮನವಿ ಮಾಡಿದ್ದರು.

ಈ ಬೆನ್ನಲ್ಲೇ ಮೋದಿಯವರು ರಷ್ಯಾ ಅಧ್ಯಕ್ಷ ಪುಟಿನ್​​ ಅವರಿಗೆ ಫೋನ್​ ಮಾಡಿ ಯುದ್ಧ ನಿಲ್ಲಿಸಿ, ಶಾಂತಿಯುತ ಮಾತುಕತೆ ನಡೆಸಿ ಎಂದು ಸಲಹೆ ನೀಡಿದ್ದರು.

Copyright © All rights reserved Newsnap | Newsever by AF themes.
error: Content is protected !!