October 17, 2021

Newsnap Kannada

The World at your finger tips!

ಶಾರುಖ್​​​ ಪುತ್ರ ಆರ್ಯನ್ ಜಮೀನು ಅಜಿ೯ ವಜಾ :14 ದಿನ ಜೈಲೇ ಗತಿ – ಕೋಟ್೯ ಆದೇಶ

Spread the love

ಐಷಾರಾಮಿ ಹಡಗೊಂದರಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದ ಆರೋಪದ ಮೇರೆಗೆ ಬಂಧಿಸಲಾಗಿದ್ದ ನಟ ಶಾರುಖ್​​ ಪುತ್ರ ಆರ್ಯನ್​​ ಖಾನ್​​ ಸಲ್ಲಿಸಿದ್ದ ಜಾಮೀನು ಅಜಿ೯ ವಜಾ ಮಾಡಿದ ಕೋರ್ಟ್ ಆರ್ಯನ್ ಸೇರಿ 8 ಮಂದಿಗೆ 14 ದಿನ ನ್ಯಾಯಾಂಗ ಬಂಧನ ನೀಡಿ ಕೋರ್ಟ್​ ಆದೇಶಿಸಿದೆ.

ಕೋರ್ಟ್​ ಡ್ರಗ್ಸ್​ ಕೇಸ್​​ ಸಂಬಂಧ ಆರ್ಯನ್ ಖಾನ್​​ಗೆ 7 ದಿನಗಳ ಎನ್​​ಸಿಬಿ ಕಸ್ಟಡಿಗೆ ನೀಡಿತ್ತು. ಇಂದಿಗೆ ಆರ್ಯನ್​​​ 7 ದಿನಗಳ ಕಸ್ಟಡಿ ಅಂತ್ಯಗೊಂಡಿತ್ತು . ಪೊಲೀಸರು ಕೋರ್ಟ್​ ಮುಂದೆ ಹಾಜರುಪಡಿಸಿದ್ದರು.

ಈಗ ಮತ್ತೆ ವಿಚಾರಣೆ ನಡೆಸಿದ ಕೋರ್ಟ್​ ಆರ್ಯನ್​​ಗೆ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದೆ.

ಇದುವರೆಗೂ ಡ್ರಗ್ಸ್ ಕೇಸಲ್ಲಿ 18 ಮಂದಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಎಲ್ಲಾ ಆರೋಪಿಗಳನ್ನು ಬಂಧಿಸಿ ಎನ್​​ಸಿಬಿ ವಿಚಾರಣೆಗೆ ಒಳಪಡಿಸಿದೆ. 23 ವರ್ಷದ ಆರ್ಯನ್ ಖಾನ್​​​ಗೆ ರೇವ್ ಪಾರ್ಟಿಗೆ ಆಹ್ವಾನ ಮಾಡಲಾಗಿತ್ತು. ಯಾರಿಗೆ ಕ್ಯಾಬಿನ್ ಕೂಡ ನೀಡಿರಲಿಲ್ಲ. ಹೀಗಾಗಿ ಡ್ರಗ್ಸ್​ ಕೇಸ್​​ಗೂ ಆರ್ಯನ್​​ಗೂ ಯಾವುದೇ ಸಂಬಂಧವಿಲ್ಲ ಎಂದು  ವಕೀಲ ಸತೀಶ್ ಮಾನೆಶಿಂಧೆ ಕೋರ್ಟ್​ ಮುಂದೆ ವಾದಿಸಿದ್ದರು.

ಇನ್ನೊಂದಷ್ಟು ದಿನ ಕಸ್ಟಡಿಗೆ ನೀಡುವಂತೆ ಎನ್​​ಸಿಬಿ ಪರ ವಕೀಲರು ಕೋರ್ಟ್​​ಗೆ ಮನವಿ ಮಾಡಿದ್ದರು.

error: Content is protected !!