ರೈಲಿನಲ್ಲಿ ಮತ್ತು ಬರಿಸುವ ತಂಪು ಪಾನೀಯ ನೀಡಿ ಸಹಪ್ರಯಾಣಿಕರಿಂದ ಚಿನ್ನಾಭರಣ ಕಳವು

Team Newsnap
1 Min Read

ಬೆಂಗಳೂರು : ಮತ್ತು ಬರಿಸುವ ತಂಪು ಪಾನೀಯ ನೀಡಿ ಸಹಪ್ರಯಾಣಿಕರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್‌ ಶೌಕತ್‌ ಅಲಿ(55), ಮೊಹಮ್ಮದ್‌ ಸತ್ತಾರ್‌ ಅಲಿಯಾಸ್‌ ಅಜಾದ್‌ (51) ಮತ್ತು ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮೊಹಮ್ಮದ್‌ ಅವದ್‌ (58) ನನ್ನು ಬಂಧಿಸಿ , 120 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.

ಡಿ.16 2023 ರಂದು ಜೋದ್‌ಪುರ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ರಾಜಸ್ಥಾನ ಮಾರ್ವರ್‌ ಜಿಲ್ಲೆಯ ಡವರ್‌ ಲಾಲ್‌ ದಂಪತಿ ಜೋಧ್‌ಪುರದಿಂದ ಬೆಂಗಳೂರಿಗೆ ಬರುತ್ತಿದ್ದು , ಇದೇ ರೈಲಿನಲ್ಲಿ ಆರೋಪಿಗಳು ಪ್ರಯಾಣಿಸಿದ್ದರು. ಬೀರೂರು ಜಂಕ್ಷನ್‌ ಬಳಿ ಬಾದಾಮಿ ಹಾಲಿನ ಬಾಟಲಿಗಳನ್ನು ತೆರೆದು ದೂರುದಾರರಿಗೆ ಕೊಟ್ಟಿದ್ದಾರೆ.

ಡವರ್‌ ಲಾಲ್‌ ದಂಪತಿ . ಕೆಲ ಹೊತ್ತಿನ ಬಳಿಕ ಪ್ರಜ್ಞೆ ತಪ್ಪಿ ನಿದ್ದೆಗೆ ಜಾರಿದ ವೇಳೆ ,ದಂಪತಿ ಬಳಿಯಿದ್ದ 20 ಸಾವಿರ ರೂ. ನಗದು ಹಾಗೂ 120 ಗ್ರಾಂ ಚಿನ್ನಾಭರಣ ದೋಚಿ ಮಾರ್ಗ ಮಧ್ಯೆಯೇ ರೈಲಿನಿಂದ ಇಳಿದು ಪರಾರಿಯಾಗಿದ್ದಾರೆ.ಮಲೆಮಹದೇಶ್ವರ ಬೆಟ್ಟ: 25 ದಿನಗಳಲ್ಲಿ 3 ಕೋಟಿ ರೂ. ಅಧಿಕ ಕಾಣಿಕೆ ಸಂಗ್ರಹ

ಅರಸೀಕೆರೆ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ .

Share This Article
Leave a comment