ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್ ಶೌಕತ್ ಅಲಿ(55), ಮೊಹಮ್ಮದ್ ಸತ್ತಾರ್ ಅಲಿಯಾಸ್ ಅಜಾದ್ (51) ಮತ್ತು ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮೊಹಮ್ಮದ್ ಅವದ್ (58) ನನ್ನು ಬಂಧಿಸಿ , 120 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.
ಡಿ.16 2023 ರಂದು ಜೋದ್‌ಪುರ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ರಾಜಸ್ಥಾನ ಮಾರ್ವರ್ ಜಿಲ್ಲೆಯ ಡವರ್ ಲಾಲ್ ದಂಪತಿ ಜೋಧ್‌ಪುರದಿಂದ ಬೆಂಗಳೂರಿಗೆ ಬರುತ್ತಿದ್ದು , ಇದೇ ರೈಲಿನಲ್ಲಿ ಆರೋಪಿಗಳು ಪ್ರಯಾಣಿಸಿದ್ದರು. ಬೀರೂರು ಜಂಕ್ಷನ್ ಬಳಿ ಬಾದಾಮಿ ಹಾಲಿನ ಬಾಟಲಿಗಳನ್ನು ತೆರೆದು ದೂರುದಾರರಿಗೆ ಕೊಟ್ಟಿದ್ದಾರೆ.
ಡವರ್ ಲಾಲ್ ದಂಪತಿ . ಕೆಲ ಹೊತ್ತಿನ ಬಳಿಕ ಪ್ರಜ್ಞೆ ತಪ್ಪಿ ನಿದ್ದೆಗೆ ಜಾರಿದ ವೇಳೆ ,ದಂಪತಿ ಬಳಿಯಿದ್ದ 20 ಸಾವಿರ ರೂ. ನಗದು ಹಾಗೂ 120 ಗ್ರಾಂ ಚಿನ್ನಾಭರಣ ದೋಚಿ ಮಾರ್ಗ ಮಧ್ಯೆಯೇ ರೈಲಿನಿಂದ ಇಳಿದು ಪರಾರಿಯಾಗಿದ್ದಾರೆ.ಮಲೆಮಹದೇಶ್ವರ ಬೆಟ್ಟ: 25 ದಿನಗಳಲ್ಲಿ 3 ಕೋಟಿ ರೂ. ಅಧಿಕ ಕಾಣಿಕೆ ಸಂಗ್ರಹ
ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ .
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು