ಮಹಿಳಾ ಸಂವೇದನೆಯ ಲೇಖಕಿ ಸಾರಾ ಅಬೂಬಕ್ಕರ್ ವಿಧಿವಶ

Team Newsnap
1 Min Read
Sensational female author Sara Abubakar passes away ಮಹಿಳಾ ಸಂವೇದನೆಯ ಲೇಖಕಿ ಸಾರಾ ಅಬೂಬಕ್ಕರ್ ವಿಧಿವಶ

ಕನ್ನಡ ಸಾರಸ್ವತ ಲೋಕದ ಹಿರಿಯ ಸಾಹಿತಿ, ಪ್ರಗತಿಪರ ಚಿಂತಕಿ ಸಾರಾ ಅಬೂಬಕ್ಕರ್ (86) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ರಾತ್ರಿ 8 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನಾಲ್ವರು ಪುತ್ರರು ಸೇರಿದಂತೆ ಅಪಾರ ಸಾಹಿತ್ಯ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು

ಚಂದ್ರಗಿರಿ ತೀರದಲ್ಲಿ ಕಾದಂಬರಿ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಸಹನಾ, ವಜ್ರಗಳು, ಸುಳಿಯಲಿ ಸಿಕ್ಕವರು, ಇಳಿಜಾರು, ಚಪ್ಪಲಿಗಳು, ಖೆಡ್ಡ, ಗಗನ ಸಖಿ ಇವರ ಮಹತ್ವದ ಕೃತಿಗಳು.

ಸಾರಾ ಅಬೂಬಕ್ಕರ್ ಹುಟ್ಟಿದ್ದು 30 ಜೂನ್ 1936ರ ಕಾಸರಗೋಡಿನ ಚಂದ್ರಗಿರಿಯಲ್ಲಿ. ತಂದೆ ವಕೀಲರು. ಅವರು ನ್ಯಾಯದ ಪರವಾಗಿ ಹೋರಾಡುತ್ತಿದ್ದ ರೀತಿಯೇ ಸಾರಾ ಅವರನ್ನು ಪ್ರೇರೇಪಿಸಿತ್ತು. ಹಾಗಾಗಿ ಅನೇಕ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದರು. ಸಣ್ಣವಯಸ್ಸಿನಲ್ಲೇ ಬರೆಯುವುದಕ್ಕೆ ಶುರು ಮಾಡಿದವರು. ಈವರೆಗೂ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ಕಾದಂಬರಿಗಳ ಸಂಖ್ಯೆಯೇ ದೊಡ್ಡದಿದೆ. ಅದರಲ್ಲೂ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ವಿಚಾರದಲ್ಲಿ ಸೌದಿಯ ‘ವಹಾಬಿಸಂ’ ವಿರುದ್ಧ ಮಾತನಾಡಿ, ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು.

ಸಾರಾ ಅಬೂಬಕ್ಕರ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಸತ್ತಿಮಬ್ಬೆ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ವಜ್ರಗಳು, ಅಮ್ಮಚ್ಚಿ ಎಂಬ ನೆನಪು ಸೇರಿದಂತೆ ಹಲವು ಕೃತಿಗಳು ಸಿನಿಮಾವಾಗಿವೆ.

Share This Article
Leave a comment