ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು

Team Newsnap
0 Min Read
Metro pillar collapses in Bengaluru, mother and child demise ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​​ನ ಕಬ್ಬಿಣದ ರಾಡ್​​​ ಕುಸಿದುಬಿದ್ದ ಪರಿಣಾಮ ತಾಯಿ ಹಾಗೂ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ನಾಗವಾರ ಬಳಿ ನಡೆದಿದೆ.

ತೇಜಸ್ವಿನಿ (35) ಹಾಗೂ ಎರಡೂವರೆ ವರ್ಷದ ವಿಹಾನ್ ಮೃತರು.ಕೋಲಾರದಿಂದಲೇ ಸ್ಪರ್ಧೆ: ಸಿದ್ದು ಘೋಷಣೆ


ಹೊರಮಾವು‌ ಡಿಎಕ್ಸ್​​​ ಮಾಕ್ಸ್​​​ ಅಪಾರ್ಟ್‌ಮೆಂಟ್ ನಿವಾಸಿಗಳು. ಗಂಭೀರ ಗಾಯಗೊಂಡಿದ್ದ ತಾಯಿ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ತಾಯಿ, ಹಾಗೂ ಮಗು ಸಾವನ್ನಪ್ಪಿದ್ದಾರೆ.

ಕುಟುಂಬ ಸಮೇತ ಮಕ್ಕಳನ್ನು ಬೇಬಿ ಸಿಟ್ಟಿಂಗ್​ಗೆ ಬಿಡಲು ಬೈಕ್​ನಲ್ಲಿ ತೆರಳುತ್ತಿದ್ದಾಗ ದಿಢೀರ್ ಫಿಲ್ಲರ್​ ಕುಸಿದು ದುರ್ಘಟನೆ ಸಂಭವಿಸಿದೆ.

Share This Article
Leave a comment