ಹೊಳಪುಳ್ಳ ಕೇಶಗಳಿಗೂ ಆತ್ಮವಿಶ್ವಾಸದ ನಂಟು

Team Newsnap
4 Min Read

ನಾವು ಆರೋಗ್ಯಕರವಾದ ಸೊಂಪಾದ ಮತ್ತು ಹೊಳಪುಳ್ಳ ಕೂದಲನ್ನು ಹೊಂದಿದಾಗ ನಾವು ಆತ್ಮವಿಶ್ವಾಸದ ಅನುಭವ ಹೊಂದುತ್ತೇವೆ. ಅಲ್ಲವೇ ? ಅಕಸ್ಮಾತ್ ನಮ್ಮ ಕೂದಲು ತೆಳುವಾಗುವುದು, ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದು ಆಗಾಗ್ಗೆ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.

ಕೂದಲು ಉದುರುವುದು, ತಲೆಹೊಟ್ಟು, ತುರಿಕೆ, ಸತ್ವಹೀನ ಕೂದಲು, ಬಿಳಿಗೂದಲು… ಇವು ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಗಳು. ಶ್ಯಾಂಪೂ, ಎಣ್ಣೆ, ಕಂಡಿಷನರ್‌ ಅಂತ ಏನನ್ನೆಲ್ಲಾ ಬಳಸಿದರೂ ಪ್ರಯೋಜನ ಮಾತ್ರ ಶೂನ್ಯ.

ನಿಜ ಹೇಳಬೇಕೆಂದರೆ, ಕೂದಲಿನ ಆರೋಗ್ಯವನ್ನು ಕಾಪಾಡಲು ಹಲವು ಮಾರ್ಗಗಳಿವೆ. ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಬೀಜಗಳು. ಕೂದಲಿಗೆ ಪುನರ್ಯೌವನಗೊಳಿಸಲು ಸಾಕಷ್ಟು ಪ್ರಮುಖ ಪಾತ್ರ ವಹಿಸುತ್ತವೆ.

ಬೀಜಗಳು ನಿಮ್ಮ ಕೂದಲು ಚೇತರಿಕೆಗೆ ಸಹಾಯ ಮಾಡುತ್ತದೆ. ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಉತ್ತಮ ಬೀಜಗಳ ಬಗ್ಗೆ ತಿಳಿಯೋಣ.

ಕೂದಲು ಬೆಳವಣಿಗೆಗೆ ಬೀಜಗಳು ಏಕೆ ಪ್ರಯೋಜನಕಾರಿ ?

ನೀವು ತಿನ್ನುವ ಆಹಾರವು ಸಾಮಾನ್ಯವಾಗಿ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಇದು ಕೂದಲಿನ ಆರೋಗ್ಯವನ್ನೂ ಒಳಗೊಂಡಿರುತ್ತದೆ. ನಿಮ್ಮ ಕೂದಲು ಸಾಕಷ್ಟು ಪೋಷಕಾಂಶಗಳನ್ನು ಪಡೆಯದಿದ್ದರೆ, ಕೂದಲು ಉದುರುವುದು, ತಲೆಹೊಟ್ಟು, ತುರಿಕೆ, ಸತ್ವಹೀನ ಕೂದಲು, ಬಿಳಿಗೂದಲು ಹೀಗೆ ಅನೇಕ ರೀತಿಯ ನಾನಾ ತೊಂದರೆಗಳು ಉದ್ಬವವಾಗುತ್ತದೆ ಅದನ್ನು ಸರಿಪಡಿಸಲು ಸರಳವಾದ ಮಾರ್ಗವೆಂದರೆ ನಿಮ್ಮ ಆಹಾರದಲ್ಲಿ ಬೀಜಗಳನ್ನು ಬಳಸುವುದು.

ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುವ ಸಾಮಾನ್ಯ ಬೀಜಗಳ ಪಟ್ಟಿ ಇಲ್ಲಿದೆ.

ಎಳ್ಳು

ellu

ಉತ್ತಮ ಕೂದಲು ಬೆಳವಣಿಗೆಗೆ ಸರಿಯಾದ ಪೋಷಣೆಯ ಅಗತ್ಯವಿರುತ್ತದೆ. ಮತ್ತು ಎಳ್ಳು ಪೋಷಣೆಯನ್ನು ನೀಡುತ್ತದೆ, “ಕಪ್ಪು ಮತ್ತು ಬಿಳಿ ಎಳ್ಳು, ಖನಿಜಗಳು, ಜೀವಸತ್ವಗಳಿಂದ ತುಂಬಿರುತ್ತವೆ, ಅದು ಕೂದಲಿಗೆ ಹೊಳಪು ಮತ್ತು ಶಕ್ತಿಯನ್ನು ನೀಡುತ್ತದೆ”ಎಳ್ಳಿನ ಜ್ಯೂಸ್ ,ಪರೋಟಾ ಸಲಾಡ್ ಹಾಗೂ ವಿವಿಧ ಅಡುಗೆಗಳಲ್ಲಿ ಬಳಸಬಹುದು.

ಕಪ್ಪು ಜೀರಿಗೆ

ಉತ್ತಮ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಅದರ ಆಂಟಿಫಂಗಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.ಕಪ್ಪು ಜೀರಿಗೆಯನ್ನು ಕೊಬ್ಬರಿಎಣ್ಣೆಯಲ್ಲಿ ನೆನಸಿ ನಂತರ ತಲೆಗೆ ಎಣ್ಣೆ ಹಚ್ಚುವುದರ ಮೂಲಕ ಉಪಯೋಗಿಸಬಹುದು.

ಸೂರ್ಯಕಾಂತಿ ಬೀಜಗಳು

surya kanthi

ಸೂರ್ಯಕಾಂತಿ ಬೀಜಗಳನ್ನು ಬಳಸಿದರೆ, ನಿಮ್ಮ ಕೂದಲು ಸೂರ್ಯಕಾಂತಿಯಂತೆ ಅರಳುತ್ತದೆ. ಅವು ತುಂಬಾ ಪೌಷ್ಟಿಕವಾಗಿದೆ ಮತ್ತು ಪರಿಸರ ಹಾನಿಯಿಂದ ಕೂದಲನ್ನು ರಕ್ಷಿಸುತ್ತದೆ, ಸೂರ್ಯಕಾಂತಿ ಬೀಜಗಳನ್ನು ಉಪಹಾರ ಓಟ್ಸ್, ಸೂಪ್‌ಗಳು, ಸ್ಮೂಥಿಗಳು, ಮತ್ತು ಸಲಾಡ್‌ಗಳಲ್ಲಿ ಅವುಗಳನ್ನು ಬಳಸಬಹುದು.

ಮೆಂತ್ಯ

ಮೆಂತ್ಯ ಕೂದಲು ಉದುರುವಿಕೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮೇಥಿ ಅಥವಾ ಮೆಂತ್ಯ ಬೀಜಗಳು ಕೂದಲು ಬೆಳವಣಿಗೆಗೆ ಉತ್ತಮ ಆಹಾರವಾಗಿದೆ ಮತ್ತು ತಲೆಹೊಟ್ಟು ದೂರವಿಡುತ್ತವೆ. ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುವ ಪ್ರೋಟೀನ್, ನಿಯಾಸಿನ್, ಅಮೈನೋ ಆಮ್ಲಗಳು ಮತ್ತು ಪೊಟ್ಯಾಸಿಯಮ್ ಅನ್ನು ಒಳಗೊಂಡಿರುವ ಕಾರಣ ಅವುಗಳನ್ನು ಭಾರತೀಯ ಅಡುಗೆಗಳಲ್ಲಿ ಹೇರಳವಾಗಿ ಬಳಸಲಾಗುತ್ತದೆ.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು ಸತು, ಸೆಲೆನಿಯಮ್, ತಾಮ್ರ, ವಿಟಮಿನ್ ಎ, ಬಿ ಮತ್ತು ಸಿ ಯಿಂದ ತುಂಬಿರುತ್ತವೆ, ಇದು ಕೂದಲು ತೆಳುವಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಗಸೆಬೀಜಗಳು

agase

ಅಗಸೆಬೀಜ ಅಥವಾ ಅಲ್ಸಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ , ಫೈಬರ್, ಪ್ರೊಟೀನ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಫಾಸ್ಫರಸ್, ಇತ್ಯಾದಿಗಳ ಸಮೃದ್ಧ ಮೂಲವಾಗಿದೆ.

ಕೂದಲು ಉದುರುವ ಸಮಸ್ಯೆಗೆ ಕಾರಣ:

ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ ಮತ್ತು ಅನುವಂಶೀಯವಾಗಿಯೂ ಬರಬಹುದು. ಇದಕ್ಕೆ ಕೆಲವು ಮನೆ ಮದ್ದುಗಳನ್ನು ಬಳಸಬಹುದಾಗಿದೆ.

  • ಅತ್ಯಧಿಕ ಖಾರ, ಉಪ್ಪು, ಹುಳಿ ಆಹಾರ ಸೇವನೆ
  • ಕಾಫಿ ಕುಡಿಯುವ ಚಟ
  • ಮದ್ಯಪಾನ
  • ಅತೀಹೆಚ್ಚು ಆಹಾರ ಸೇವನೆ
  • ಧೂಮಪಾನ
  • ಎಣ್ಣೆಯಲ್ಲಿ ಕರಿದ ಪದಾರ್ಥಗಳು
  • ಅಸಿಡಿಟಿ ಆಹಾರಗಳು ಇವುಗಳು ಪಿತ್ತವನ್ನು ಹೆಚ್ಚು ಮಾಡುತ್ತದೆ ಇದರಿಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ.

ಕೇಶ ಪೋಷಣೆಗೆ ಕೆಲವು ಮನೆ ಮದ್ದುಗಳು

ನಿಂಬೆ ರಸ, ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಇದರಿಂದ ತುರಿಕೆ, ತಲೆಹೊಟ್ಟು ಸಮಸ್ಯೆಗಳನ್ನು ನಿವಾರಿಸಬಹುದು.

ಆಕರ್ಷಕ ಕೂದಲು ಬೇಕೆಂದರೆ ನಿಮ್ಮ ಊಟದಲ್ಲಿ ಹಸಿರು ಸೊಪ್ಪುಗಳು, ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಿ.
ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ.

alovera

ಅಲೋವೆರಾ ಎಲೆಗಳಿಂದ ತಲೆ ಚೆನ್ನಾಗಿ ಉಜ್ಜಿದ ನಂತರ 20 ನಿಮಿಷಗಳ ಕಾಲ ಬಿಡಿ. ಅದರ ನಂತರ ಸಾಮಾನ್ಯ ತಂಪಾದ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ.

ಹೇರ್ ಕಲರ್‌ಗಳನ್ನು ಹೆಚ್ಚು ಬಳಸಿ ಕೂದಲು ಹಾಳಾಗಿದ್ದಲ್ಲಿ ಎರಡು ಬಾಳೆ ಹಣ್ಣು, ಎರಡು ಕಪ್ ಕತ್ತರಿಸಿದ ಪರಂಗಿ ಹಣ್ಣು, ಎರಡು ಚಮಚ ಬೇವಿನ ಎಲೆ ಪುಡಿ, ಉಗುರು ಬೆಚ್ಚಗಿನ ನೀರು, ಒಂದು ಕಪ್ ಬಿಯರ್ ಮಿಶ್ರಣ ಮಾಡಿ ಕೂದಲಿಗೆ ಲೇಪಿಸುವುದರಿಂದ ಹೊಳೆಯುವಂತಹ ಕೂದಲು ನಿಮ್ಮದಾಗುತ್ತದೆ.

ಕೂದಲು ಹೆಚ್ಚು ಹೊಳೆಯುವಂತೆ ಮಾಡಲು ಮೂರು ಚಮಚ ಮೊಸರು, ಎರಡು ಚಮಚ ಮೆಂತೆ ಪುಡಿ, ಎರಡು ಚಮಚ ನೆಲ್ಲಿಕಾಯಿ ಪುಡಿ, 15-20 ರುಬ್ಬಿದ ಕರಿಬೇವಿನ ಎಲೆಗಳನ್ನು ಮಿಶ್ರಣ ಮಾಡಿ. ಕೂದಲಿಗೆ ಪ್ಯಾಕ್ ಮಾಡುವುದರಿಂದ ಕಾಂತಿಯುತವಾದ ಕೂದಲು ನಿಮ್ಮದಾಗುತ್ತದೆ.

ಬೇಸಿಗೆಯಲ್ಲಿ ಹವಾಮಾನವು ಶುಷ್ಕತೆಯಿಂದ ಕೂಡಿರುತ್ತದೆ. ಜೊತೆಗೆ ದೇಹದಲ್ಲಿ ಅತಿಯಾಗಿ ಬೆವರುವಿಕೆಯು ಉಂಟಾಗುವುದು. ಇವುಗಳಿಂದ ಕೂದಲನ್ನು ರಕ್ಷಿಸುವುದು ಅತ್ಯಗತ್ಯ. ಕೂದಲು ಒಣಗುವುದು, ಕವಲು ಒಡೆಯುವುದು, ಬಣ್ಣ ಕಳೆದುಕೊಳ್ಳುತ್ತದೆ. ಬೇಸಿಗೆಯಲ್ಲಿ ಬಹುತೇಕ ಮಂದಿ ಈಜು ಕೊಳದಲ್ಲಿ ಸಮಯವನ್ನು ಕಳೆಯುತ್ತಾರೆ. ಈಜುಕೊಳಕ್ಕೆ ಬಳಸುವ ಕ್ಲೋರಿನ್‍ಗಳು ಕೇಶರಾಶಿಗೆ ಹಾನಿಯನ್ನುಂಟು ಮಾಡುವುದು. ಕೂದಲು ಒರಟಾಗುವುದು ಹಾಗೂ ತನ್ನ ಉತ್ತಮ ಗುಣಮಟ್ಟವನ್ನು ಕಳೆದುಕೊಳ್ಳುವುದು. ಹಾಗಾಗಿ ಇಂತಹ ಸಮಯದಲ್ಲೂ ಕೇಶಗಳ ರಕ್ಷಣೆ ಅಗತ್ಯ .

Share This Article
Leave a comment