ಸಾನಿಯಾ ಮಿರ್ಜಾ ( Sania Mirza ) – ಪಾಕಿಸ್ತಾನದ ಕ್ರಿಕೆಟ್ಟಿಗ ಶೋಯೆಬ್ ಮಲಿಕ್ ( Shoaib Malik ) ಅವರ 12 ವರ್ಷದ ವೈವಾಹಿಕ ಸಂಬಂಧ ಹಳಸಿದೆ. ಇವರಿಬ್ಬರು ವಿಚ್ಛೇದನ (Divorce) ಪಡೆಯಲು ನಿರ್ಧರಿಸಿದ್ದಾರೆ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆಯೂ ಆಗಲಿದೆ.
ಈ ನಡುವೆ ಈಗಾಗಲೇ ಇವರಿಬ್ಬರು ಬೇರೆ ಬೇರೆಯಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳು ಹೇಳಿವೆ. ಆದರೆ, ಇನ್ನೂ ಅಧಿಕೃತ ದೃಢೀಕರಣವಿಲ್ಲ.ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ ಸೂಚನೆ
ಒಂದು ಅಚ್ಚರಿಯ ಸಂಗತಿ ಎಂದರೆ ಸಾನಿಯಾ ಮಿರ್ಜಾ, ಮಲಿಕ್ಗೆ ಮೊದಲ ಪತ್ನಿಯಲ್ಲ. ಮಲಿಕ್ಗೆ ಅವರು ಎರಡನೇ ಪತ್ನಿ. ಟೆನ್ನಿಸ್ ತಾರೆಯನ್ನು ಮದುವೆ ಆಗುವುದಕ್ಕೂ ಮೊದಲು ಮಲಿಕ್ ಭಾರತದ ಹೈದರಾಬಾದ್‌ನಲ್ಲಿ ಮದುವೆಯಾಗಿದ್ದರು.
ಮಲ್ಲಿಕ್ ಮೊದಲ ಪತ್ನಿಯ ಹೆಸರು ಆಯೇಷಾ ಸಿದ್ದಿಕಿ. 2010ರಲ್ಲಿ ಶೋಯೆಬ್ ಮತ್ತು ಸಾನಿಯಾ ವಿವಾಹದ ಸುದ್ದಿ ಹೊರಬೀಳುವ ಮುನ್ನವೇ ಆಯೇಷಾ ಸಿದ್ದಿಕಿ ಸಂಬಂಧದ ಬಗ್ಗೆ ಮಾಹಿತಿ ಬಂದಿತ್ತು. ಆಗ ಆಯೇಷಾ ಸಿದ್ದಿಕಿಯಿಂದ ವಿಚ್ಛೇದನ ಪಡೆಯದೇ ಮತ್ತೆ ಮದುವೆಯಾಗಲು ಬಯಸಿದ್ದರು. ಆಗ ಆಯೇಷಾ ಸಿದ್ದಿಕಿ ಸಾರ್ವಜನಿಕವಾಗಿ ನನಗೆ ವಿಚ್ಛೇದನ ನೀಡದೇ ಬೇರೆ ಮದುವೆ ಆಗಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಮಲಿಕ್, ಆಯೇಷಾಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದರು.
ಮಲಿಕ್ ಆಯೇಷಾಗೆ ಮಲಿಕ್ ವಿಚ್ಛೇದನ ನೀಡಿದರು. ತಾನು ದಪ್ಪಗಿರುವ ಕಾರಣ ಶೋಯೆಬ್ ತನ್ನನ್ನು ಇಷ್ಟಪಡುವುದಿಲ್ಲ ಎಂದಿದ್ದರು ಆಯೇಷಾ. ಈ ಎಲ್ಲಾ ಬೆಳವಣಿಗಳ ನಡುವೆ ಮಲಿಕ್ ಮತ್ತು ಸಾನಿಯಾ ನಡುವಿನ ಸಂಬಂಧ ಇನ್ನಷ್ಟು ಹತ್ತಿರವಾಗಿತ್ತು. 2010ರಲ್ಲಿ ಇಬ್ಬರೂ ವಿವಾಹವಾದರು. ಹೈದರಾಬಾದ್ನಲ್ಲಿಯೇ ಮದುವೆ ನಡೆದಿತ್ತು. ಸಾನಿಯಾ ಮತ್ತು ಶೋಯೆಬ್ 2018ರಲ್ಲಿ ಗಂಡು ಮಗುವಿಗೆ ಅಪ್ಪ-ಅಮ್ಮರಾದರು.
- ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್ನ 114 ಕೋಟಿ ರೂ. ಆಸ್ತಿ ಜಪ್ತಿ
- ಗಾಂಜಾ ಕೇಸ್. : ಪತಿ – ಪತ್ನಿ ಅಂದರ್ – ದಂಧೆಗೆ ತನ್ನ ಮಕ್ಕಳನ್ನೇ ಬಳಸಿಕೊಳ್ತಿದ್ದ ಖತರ್ನಾಕ್ ಲೇಡಿ
- ಶಾಸಕ ಮಾಡಾಳು ವಿರೂಪಾಕ್ಷಪ್ಪ 5 ದಿನ ಲೋಕಾಯುಕ್ತ ವಶಕ್ಕೆ
- ಶಾಸಕ ರಾಜೇಗೌಡರು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 35 ಲಕ್ಷ ರು ಮೌಲ್ಯದ ಕುಕ್ಕರ್ ಜಪ್ತಿ
- ಗ್ರಾಮ ಲೆಕ್ಕಿಗ ಯುವತಿ ನೇಣು ಬಿಗಿದುಕೊಂಡ ಆತ್ಮಹತ್ಯೆ
- ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧಿಸಿದ ಲೋಕಾಯುಕ್ತ ಪೋಲಿಸರು
More Stories
ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್ನ 114 ಕೋಟಿ ರೂ. ಆಸ್ತಿ ಜಪ್ತಿ
ಶಾಸಕ ರಾಜೇಗೌಡರು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 35 ಲಕ್ಷ ರು ಮೌಲ್ಯದ ಕುಕ್ಕರ್ ಜಪ್ತಿ
ಸಚಿವ ನಾರಾಯಣಗೌಡ ಫೋಟೋ ಇರುವ 450 ಸ್ಕೂಲ್ ಬ್ಯಾಗ್ ಜಪ್ತಿ