ಜಿಲ್ಲೆಯ ಜೆಡಿಎಸ್ ನಾಯಕರು ನನ್ನ ಮಟ್ಟ ಹಾಕಲು ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಲ್ಲಿ ಬಲಿಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡಹೇಳಿದರು.
ನಿಖಿಲ್ ಅವರನ್ನು ಮಂಡ್ಯಗೆ ತರುವ ಯೋಚನೆ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಇರಲಿಲ್ಲ. ನನ್ನನ್ನು ತೆಗೆಯಲು ಮಂಡ್ಯ ಜಿಲ್ಲೆಯ ಕೆಲ ಶಾಸಕರು ಏನೇನೋ ಕಥೆ ಕಟ್ಟಿದ್ದರು. 75 ಸಾವಿರ ಮತ ಹಾಕುವುದು ನನ್ನ ಜವಾಬ್ದಾರಿ, ನೀವು ನಿಖಿಲ್ ನಿಲ್ಲಿಸಿ ಎಂದು ಕುಮಾರಸ್ವಾಮಿ ಜೊತೆ ಮಾತುಕತೆ ಮಾಡಿದ್ದರು.ಸಾನಿಯಾ ಮಿರ್ಜಾ ಶೋಯೆಬ್ ಮಲಿಕ್ ವಿಚ್ಛೇದನ? : ಮೊದಲ ಪತ್ನಿ ಕೂಡ ಭಾರತೀಯಳೇ..!
ನನ್ನನ್ನು ಮಂಡ್ಯ ಜಿಲ್ಲೆಯಲ್ಲಿ ಸೈಡ್ ಲೈನ್ ಮಾಡಲು ಹೋಗಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರು ನಿಖಿಲ್ ಅವರನ್ನು ಬಲಿ ಕೊಟ್ಟಿದ್ದಾರೆ. ನಿಖಿಲ್‍ಗೆ ತುಂಬಾ ಅವಕಾಶವಿತ್ತು, ಅವರು ಒಳ್ಳೆಯ ಸಿನಿಮಾ ನಟ. ಅವರು ಚುನಾವಣೆಗೆ ನಿಲ್ಲಲು ರೆಡಿ ಇರಲಿಲ್ಲ, ಮಂಡ್ಯ ಜಿಲ್ಲೆಯ ಶಾಸಕರ ಒತ್ತಡದ ಮೇಲೆ ಕುಮಾರಸ್ವಾಮಿ ಅವರು ಚುನಾವಣೆಗೆ ನಿಲ್ಲಿಸಿದರು. ಇದರಿಂದ ಅವರಿಗೆ ಕೆಟ್ಟ ಹೆಸರು ಬಂದಿದೆ ಎಂದು ಹೇಳಿದರು.
More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು
ಪಿಯು ಕಾಲೇಜು 4055 ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಮ್ಮತಿ