December 19, 2024

Newsnap Kannada

The World at your finger tips!

divorce , cricketer , rumor

Sania Mirza Shoaib Malik Divorce? : First wife is also Indian..! ಸಾನಿಯಾ ಮಿರ್ಜಾ ಶೋಯೆಬ್ ಮಲಿಕ್ ವಿಚ್ಛೇದನ? : ಮೊದಲ ಪತ್ನಿ ಕೂಡ ಭಾರತೀಯಳೇ..!

ಸಾನಿಯಾ ಮಿರ್ಜಾ ಶೋಯೆಬ್ ಮಲಿಕ್ ವಿಚ್ಛೇದನ? : ಮೊದಲ ಪತ್ನಿ ಕೂಡ ಭಾರತೀಯಳೇ..!

Spread the love

ಸಾನಿಯಾ ಮಿರ್ಜಾ ( Sania Mirza ) – ಪಾಕಿಸ್ತಾನದ ಕ್ರಿಕೆಟ್ಟಿಗ ಶೋಯೆಬ್ ಮಲಿಕ್ ( Shoaib Malik ) ಅವರ 12 ವರ್ಷದ ವೈವಾಹಿಕ ಸಂಬಂಧ ಹಳಸಿದೆ. ಇವರಿಬ್ಬರು ವಿಚ್ಛೇದನ (Divorce) ಪಡೆಯಲು ನಿರ್ಧರಿಸಿದ್ದಾರೆ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆಯೂ ಆಗಲಿದೆ.

ಈ ನಡುವೆ ಈಗಾಗಲೇ ಇವರಿಬ್ಬರು ಬೇರೆ ಬೇರೆಯಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳು ಹೇಳಿವೆ. ಆದರೆ, ಇನ್ನೂ ಅಧಿಕೃತ ದೃಢೀಕರಣವಿಲ್ಲ.ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ ಸೂಚನೆ

ಒಂದು ಅಚ್ಚರಿಯ ಸಂಗತಿ ಎಂದರೆ ಸಾನಿಯಾ ಮಿರ್ಜಾ, ಮಲಿಕ್​ಗೆ ಮೊದಲ ಪತ್ನಿಯಲ್ಲ. ಮಲಿಕ್​ಗೆ ಅವರು ಎರಡನೇ ಪತ್ನಿ. ಟೆನ್ನಿಸ್ ತಾರೆಯನ್ನು ಮದುವೆ ಆಗುವುದಕ್ಕೂ ಮೊದಲು ಮಲಿಕ್ ಭಾರತದ ಹೈದರಾಬಾದ್‌ನಲ್ಲಿ ಮದುವೆಯಾಗಿದ್ದರು.

ಮಲ್ಲಿಕ್ ಮೊದಲ ಪತ್ನಿಯ ಹೆಸರು ಆಯೇಷಾ ಸಿದ್ದಿಕಿ. 2010ರಲ್ಲಿ ಶೋಯೆಬ್ ಮತ್ತು ಸಾನಿಯಾ ವಿವಾಹದ ಸುದ್ದಿ ಹೊರಬೀಳುವ ಮುನ್ನವೇ ಆಯೇಷಾ ಸಿದ್ದಿಕಿ ಸಂಬಂಧದ ಬಗ್ಗೆ ಮಾಹಿತಿ ಬಂದಿತ್ತು. ಆಗ ಆಯೇಷಾ ಸಿದ್ದಿಕಿಯಿಂದ ವಿಚ್ಛೇದನ ಪಡೆಯದೇ ಮತ್ತೆ ಮದುವೆಯಾಗಲು ಬಯಸಿದ್ದರು. ಆಗ ಆಯೇಷಾ ಸಿದ್ದಿಕಿ ಸಾರ್ವಜನಿಕವಾಗಿ ನನಗೆ ವಿಚ್ಛೇದನ ನೀಡದೇ ಬೇರೆ ಮದುವೆ ಆಗಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಮಲಿಕ್, ಆಯೇಷಾಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದರು.

ಮಲಿಕ್ ಆಯೇಷಾಗೆ ಮಲಿಕ್ ವಿಚ್ಛೇದನ ನೀಡಿದರು. ತಾನು ದಪ್ಪಗಿರುವ ಕಾರಣ ಶೋಯೆಬ್ ತನ್ನನ್ನು ಇಷ್ಟಪಡುವುದಿಲ್ಲ ಎಂದಿದ್ದರು ಆಯೇಷಾ. ಈ ಎಲ್ಲಾ ಬೆಳವಣಿಗಳ ನಡುವೆ ಮಲಿಕ್ ಮತ್ತು ಸಾನಿಯಾ ನಡುವಿನ ಸಂಬಂಧ ಇನ್ನಷ್ಟು ಹತ್ತಿರವಾಗಿತ್ತು. 2010ರಲ್ಲಿ ಇಬ್ಬರೂ ವಿವಾಹವಾದರು. ಹೈದರಾಬಾದ್​​ನಲ್ಲಿಯೇ ಮದುವೆ ನಡೆದಿತ್ತು. ಸಾನಿಯಾ ಮತ್ತು ಶೋಯೆಬ್ 2018ರಲ್ಲಿ ಗಂಡು ಮಗುವಿಗೆ ಅಪ್ಪ-ಅಮ್ಮರಾದರು.

Copyright © All rights reserved Newsnap | Newsever by AF themes.
error: Content is protected !!