ಸ್ಯಾಂಡಲ್ ವುಡ್ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

Team Newsnap
1 Min Read
Sandalwood veteran actor Lohitashwa is no more ಸ್ಯಾಂಡಲ್ ವುಡ್ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಲೋಹಿತಾಶ್ವ ವಿಧಿವಶ.

ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿದ್ದ ನಟ ಲೋಹಿತಾಶ್ವ ಅವರನ್ನು ಸಾಗರ್ ಅಪಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮಧ್ಯಾಹ್ನ 2:45 ಕ್ಕೆ ಅವರು ವಿಧಿ ವಶರಾಗಿದ್ದಾರೆ.79ರ ವೃದ್ಧನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡ್ಲು – ಹನಿಟ್ರ್ಯಾಪ್‍ಗೆ ಯತ್ನಿಸಿದ ಆಂಟಿ ಬಂಧನ 

ತಮ್ಮ ಕಂಚಿನ ಕಂಠ, ಪ್ರಬುದ್ಧ ನಟನೆಯ ಮೂಲಕ ಕನ್ನಡ ಸಿನಿಪ್ರಿಯರ ನೆನಪಲ್ಲಿ ಅಚ್ಚಳಯದೇ ಉಳಿದಿರುವ ನಟ ಲೋಹಿತಾಶ್ವ. ತುಮಕೂರಿನ ತೊಂಡಗೆರೆಯಲ್ಲಿ 1939 ರಲ್ಲಿ ಜನಿಸಿದ ಇವರು ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರು.

ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿರುವ ಇವರು ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ , ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇಂಗ್ಲೀಷ್ ಸಾಹಿತ್ಯದಲ್ಲಿ ಮೈಸೂರು ವಿವಿ ಯಲ್ಲಿ ಪಿ.ಹೆಚ್.ಡಿ ಪಡೆದಿರುವ ಇವರು ಕೆಲವು ನಾಟಕಗಳು, ಕವನ ಸಂಕಲನ, ಕಥಾ ಸಂಕಲನ ಬರೆದಿದ್ದಾರೆ.ಇವರ ಮಗ ಶರತ್ ಲೋಹಿತಾಶ್ವ ಕೂಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

Share This Article
Leave a comment