79ರ ವೃದ್ಧನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡ್ಲು – ಹನಿಟ್ರ್ಯಾಪ್‍ಗೆ ಯತ್ನಿಸಿದ ಆಂಟಿ ಬಂಧನ

Team Newsnap
1 Min Read
79-year-old man naked and clicked photo - Aunty arrested for honeytrap 79ರ ವೃದ್ಧನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡ್ಲು – ಹನಿಟ್ರ್ಯಾಪ್‍ಗೆ ಯತ್ನಿಸಿದ ಆಂಟಿ ಬಂಧನ

ಕಷ್ಟದಲ್ಲಿ ಇದ್ದ ಮಹಿಳೆಯೊಬ್ಬಳಿಗೆ ಸಾಲ ನೀಡಿದ್ದ ವೃದ್ದ, ಮತ್ತೆ ಮರಳಿ ಸಾಲ ವಾಪಸ್ ಕೇಳಿದಾಗ ಆತನಿಗೆ ಮತ್ತು ಬರಿಸಿ ನಗ್ನ ಮಾಡಿ ತನ್ನ ಜೊತೆ ಮಲಗಿದ ರೀತಿ ಫೋಟೋ ತೆಗೆಸಿಕೊಂಡು ಹನಿಟ್ರ್ಯಾಪ್‍ಗೆ ಯತ್ನಿಸಿ, 15 ಲಕ್ಷಕ್ಕೆ ಬೇಡಿಕೆ ಇಟ್ಟ ಆಂಟಿಯನ್ನು ಪೊಲೀಸರು ಬಂಧಿಸಿದ ಘಟನೆ ದಾವಣಗೆರೆಯಲ್ಲಿ ಜರುಗಿದೆ.

ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯ ಚಿದಾನಂದಪ್ಪ (79) ಹನಿಟ್ರ್ಯಾಪ್‍ಗೆ ಒಳಗಾಗಿದ್ದ ಸರಸ್ವತಿ ನಗರದ ನಿವಾಸಿ ಯಶೋಧ (32)ಜೊತೆಗೆ ವೃದ್ಧ ಚಿದಾನಂದಪ್ಪರ ಪರಿಚಯವಾಗಿದೆ. ಹೀಗೆ ಪರಿಚಯವಾಗಿ ಇಬ್ಬರ ನಡುವೆ ಸ್ನೇಹವಾಗಿದೆ. ನಂತರ ಯಶೋಧ, ಚಿದಾನಂದಪ್ಪ ಅವರನ್ನು ಮನೆಗೆ ಆಹ್ವಾನಿಸಿ ಆಗಾಗ ಟೀ, ಕಾಫಿ ಜ್ಯೂಸ್ ಕೊಡುತ್ತಿದ್ದಳು.ರೋಹಿತ್ ಗೆ ಗಾಯ: ಮಹತ್ವದ ಪಂದ್ಯಕ್ಕೆ​ ಅಲಭ್ಯ..? ಟೀಂ ಇಂಡಿಯಾ ಕ್ಯಾಪ್ಟನ್​ ಪಟ್ಟ ರಾಹುಲ್ – ಕೊಹ್ಲಿಗೆ

ಯಶೋಧ ಚಿದಾನಂದಪ್ಪ ಅವರ ಬಳಿ ಆಗಾಗ ನೆಪಗಳನ್ನು ಹೇಳಿ ಐದು, ಹತ್ತು ಅಂತ ಬರೋಬ್ಬರಿ 86 ಸಾವಿರ ರೂಪಾಯಿ ಸಾಲ ಪಡೆದಿದ್ದಾಳೆ. ಕೆಲಸದಿಂದ ನಿವೃತ್ತಿರಾಗಿದ್ದ ವೃದ್ಧ ನಂತರ ತಾನು ಮಹಿಳೆಗೆ ನೀಡಿದ್ದ ಹಣ ನೀಡುವಂತೆ ಮರು ಕೇಳಿದ್ದಾನೆ. ಆಗ ಈಗ ಅಂತಾ ಹೇಳಿ ಆ ಮಹಿಳೆ ಹಣ ವಾಪಸ್ ಕೊಟ್ಟಿರಲಿಲ್ಲ.

ಚಿದಾನಂದಪ್ಪ 7 ರಿಂದ 8 ಲಕ್ಷಕ್ಕೆ ಮಾತನಾಡಿ ಡೀಲ್ ಮುಗಿಸಲು ಮುಂದಾಗಿದ್ದಾರೆ. ಆದರೆ ಯಶೋಧ ಮಾತ್ರ 15 ಲಕ್ಷ ಬೇಕೆ, ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದೇ ವೇಳೆ ಚಿದಾನಂದಪ್ಪರ ವಾಟ್ಸಪ್‍ಗೆ ಒಂದು ನಗ್ನವಾದ ಫೋಟೋ ಅವಳ ಮುಖ ಕಾಣದ ಹಾಗೆ ಮಾಡಿ ಕಳುಹಿಸಿದ್ದಾಳೆ. ಪರಿಸ್ಥಿತಿ ಕೈ ಬಿಡುವ ಲಕ್ಷಣವಿತ್ತು. ಈ ವಿಚಾರ ಚಿದಾನಂದಪ್ಪ ತನ್ನ ಪುತ್ರನಿಗೆ ಹೇಳಿದ್ದಾರೆ. ಆಗ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ.

ಅಜ್ಜನಿಗೆ ಹನಿಟ್ರ್ಯಾಪ್ ಮಾಡಿ 15 ಲಕ್ಷ ವಸೂಲಿಗೆ ಮುಂದಾದ ಯಶೋಧ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

Share This Article
Leave a comment