ಟಾಲಿವುಡ್ ( Tollywood ) ನಟಿ ಸಮಂತಾ ( Samantha ) ಸದ್ಯ ʻಯಶೋದಾʼ ( Yashoda )ಚಿತ್ರದ ಟ್ರೈಲರ್ ಮೂಲಕ ಸೌಂಡ್ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ತಮ್ಮ ಆರೋಗ್ಯದ ಕುರಿತು ಸಮಂತಾ ಇದೀಗ ಮೌನ ಮುರಿದಿದ್ದಾರೆ. ಆರೋಗ್ಯದ ಸ್ಥಿತಿಯ ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ.
‘ ಯಶೋದಾ' ಚಿತ್ರದ ಟ್ರೈಲರ್‌ನಿಂದ ( Trailer ) ಸಮಂತಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ.
‘ ಯಶೋದಾ’ ಚಿತ್ರದ ಟ್ರೈಲರ್‌ಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ.
ತಾವು ಮೈಯೋಸಿಟಿಸ್ ( Myositis ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಫೋಟೋ ಜೊತೆ ಪೋಸ್ಟ್ ಮಾಡಿ ತಿಳಿಸಿದ್ದಾರೆ.KSRTC ಯಲ್ಲಿ ಬಸ್ ನಲ್ಲಿ 30 ಕೆಜಿವರೆಗೆ ಲಗೇಜ್ ಉಚಿತ : ನಾಯಿಗೆ ಪುಲ್, ಮರಿಗೆ ಅರ್ಧ ಟಿಕೆಟ್
ವೈದ್ಯಕೀಯ ಸ್ಥಿತಿಯಲ್ಲಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿರುವ ತಮ್ಮ ಫೋಟೋವನ್ನು ಸಮಂತಾ ಶೇರ್ ಮಾಡಿ, ʻಯಶೋದಾʼ ಟ್ರೈಲರ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ ಧನ್ಯವಾದ ತಿಳಿಸಿದ್ದಾರೆ. ಮೈಯೋಸಿಟಿಸ್ ಹೆಸರಿನ ಅಪರೂಪದ ಕಾಯಿಲೆ ಇದೆ. ಈ ಕಾಯಿಲೆ ಬಂದರೆ ವ್ಯಕ್ತಿ ಕುಗ್ಗುತ್ತಾನೆ. ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸ್ನಾಯು ಸೆಳೆತ ಶುರುವಾಗುತ್ತದೆ. ಸ್ವಲ್ಪ ದೂರ ನಡೆದರೂ ಸುಸ್ತು ಎನಿಸುತ್ತದೆ. 30-60ರ ವಯಸ್ಸಿನವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಇದಕ್ಕೆ ಸರಿಯಾದ ಚಿಕಿತ್ಸೆ ಕೊಡದೆ ಇದ್ದರೆ ದಿನ ಕಳೆದಂತೆ ಪರಿಸ್ಥಿತಿ ಬೇರೆಯ ಹಂತಕ್ಕೆ ಹೋಗುತ್ತದೆ. ಈಗ ಸಮಂತಾ ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ನಾನು ಒಳ್ಳೆಯ ದಿನ ಮತ್ತು ಕೆಟ್ಟ ದಿನಗಳನ್ನು ಹೊಂದಿದ್ದೇನೆ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕೂಡ. ಇನ್ನೂ ಒಂದು ದಿನವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅನಿಸಿದಾಗಲೂ, ಹೇಗಾದರೂ ಆ ಕ್ಷಣ ಹಾದು ಹೋಗುತ್ತದೆ. ನಿಮ್ಮೆಲ್ಲರನ್ನೂ ನಾನು ಪ್ರೀತಿಸುತ್ತೇನೆ ಎಂದು ಸಮಂತಾ ಪೋಸ್ಟ್ ಮಾಡಿದ್ದಾರೆ. ನೆಚ್ಚಿನ ನಟಿ ಸಮಂತಾ ಆದಷ್ಟೂ ಬೇಗ ಗುಣಮುಖರಾಗಿ ಬರಲಿ ಎಂಬುದೇ ಅಭಿಮಾನಿಗಳ ಆಶಯ.
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ