ಮೈಸೂರಿನ ‘ಶಕ್ತಿಧಾಮ’ಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ : ರಾಜ್ ಕುಟುಂಬಕ್ಕೆ ಧನ್ಯವಾದ

Team Newsnap
1 Min Read
MP Sumalatha visited 'Shakti Dham' in Mysore: Thanks to Raj family ಮೈಸೂರಿನ 'ಶಕ್ತಿಧಾಮ’ಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ : ರಾಜ್ ಕುಟುಂಬಕ್ಕೆ ಧನ್ಯವಾದ

ಮೈಸೂರಿನಲ್ಲಿರುವ ಶಕ್ತಿಧಾಮಕ್ಕೆ ಶನಿವಾರ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದರ ಬಗ್ಗೆ ತಮ್ಮ ಫೇಸ್​ಬುಕ್ ಪೇಜ್​​ನಲ್ಲಿ ಶಕ್ತಿಧಾಮದ ಕುರಿತು ಬರೆದುಕೊಂಡು, ಫೋಟೋವನ್ನು ಶೇರ್​ ಮಾಡಿದ್ದಾರೆ.

ಡಾ.ರಾಜಕುಮಾರ್ ಅವರ ಕುಟುಂಬದ ಹೆಮ್ಮೆಯ ಸಂಸ್ಥೆ ಶಕ್ತಿಧಾಮಕ್ಕೆ ಡಾ.ಶಿವರಾಜಕುಮಾರ್ ದಂಪತಿಯ ಪ್ರೀತಿಯ ಆಹ್ವಾನದ ಮೇರೆಗೆ ಭೇಟಿ ಕೊಟ್ಟ ಸಂದರ್ಭ ಅವಿಸ್ಮರಣೀಯವಾಗಿತ್ತು. ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಜೊತೆ ಬೆರೆತು ಅವರ ಜೊತೆ ಕಾಲ ಕಳೆಯುವ ಅವಕಾಶ ಮಾಡಿಕೊಟ್ಟ ಡಾ.ರಾಜ್ ಕುಟುಂಬಕ್ಕೆ ಧನ್ಯವಾದಗಳು.ಸಮಂತಾಗೆ ಅಪರೂಪದ ಕಾಯಿಲೆ: ಮೌನ ಮುರಿದ ನಟಿ – ‘ ಮೈಯೋಸಿಟಿಸ್ ‘ಗೆ ಚಿಕಿತ್ಸೆ

ಅಲ್ಲಿನ ಮಕ್ಕಳ ಜೊತೆ ಅವರ ಶಿಕ್ಷಣ, ಜೀವನದ ಗುರಿಗಳ ಬಗ್ಗೆ ಮಾತನಾಡಿ ಅವರಿಗೆ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಿದೆ. ನೂರಾರು ಮಕ್ಕಳ, ಮಹಿಳೆಯರ ಭವಿಷ್ಯ ರೂಪಿಸುತ್ತಿರುವ ಈ ಮಾದರಿ ಸಂಸ್ಥೆ ನಮ್ಮೆಲ್ಲರ ಹೆಮ್ಮೆ. ಸಂಸ್ಥೆಗೆ ನನ್ನ ಕರೆಸಿಕೊಂಡ ಡಾ.ಶಿವರಾಜಕುಮಾರ್ ಅವರಿಗೆ ಮತ್ತೊಮ್ಮೆ ಧನ್ಯವಾದ ತಿಳಿಸುತ್ತಾ, ಶಕ್ತಿಧಾಮ ಇನ್ನಷ್ಟು ಎತ್ತರಕ್ಕೆ ಬೆಳೆದು ಇನ್ನು ಸಾವಿರಾರು ಮಹಿಳೆಯರಿಗೆ, ಮಕ್ಕಳಿಗೆ ನೆರವಾಗಲಿ ಎಂದು ಆಶಿಸುತ್ತೇನೆ ಎಂದರು.

Share This Article
Leave a comment