March 31, 2023

Newsnap Kannada

The World at your finger tips!

KSRTC , price , hike

Toll fee collection: KSRTC bus ticket price hike? How much is the fare for which bus? Here is the information ಟೋಲ್ ದರ ವಸೂಲಿ: KSRTC ಬಸ್​ ಟಿಕೆಟ್​ ​ದರ ಏರಿಕೆ? ಯಾವ ಬಸ್ ಗೆ ಎಷ್ಟು ದರ ? ಮಾಹಿತಿ ಇಲ್ಲಿದೆ

KSRTC ಯಲ್ಲಿ ಬಸ್ ನಲ್ಲಿ 30 ಕೆಜಿವರೆಗೆ ಲಗೇಜ್ ಉಚಿತ : ನಾಯಿಗೆ ಪುಲ್, ಮರಿಗೆ ಅರ್ಧ ಟಿಕೆಟ್

Spread the love

ಕೆ ಎಸ್ ಆರ್ ಟಿ ಸಿಯ ಬಸ್ ಗಳಲ್ಇ ಲಗೇಜ್ ಸಾಗಣೆ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಪರಿಷ್ಕೃತ ಆದೇಶದಂತೆ 30 ಕೆಜಿ ವರೆಗೆ ಪ್ರಯಾಣಿಕರ ವೈಯಕ್ತಿಕ ಲಗೇಜ್ ಕೊಂಡೊಯ್ಯಲು ಅವಕಾಶ ನೀಡಲಾಗಿದೆ.

ನಾಯಿಗೆ ಪುಲ್ ಟಿಕೆಟ್, ನಾಯಿ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸುವ ವ್ಯವಸ್ಥೆ ಜಾರಿಗೊಳಿಸಿದೆ.ಬೆಂಗಳೂರಲ್ಲಿ ಪ್ಲೈ ಓವರ್​ನಿಂದ ಬಿದ್ದು ಇಬ್ಬರು ಯುವಕರು ಸಾವು : ಮತ್ತೊಬ್ಬನಿಗೆ ಗಾಯ

ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುವ ಜೊತೆಗೆ, ಬಸ್ಸಿನಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು ಬಳಕೆ ಮಾಡಿಕೊಳ್ಳುವ ಸಂಬಂಧ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸಹಿತ, ಪ್ರಯಾಣಿಕ ರಹಿತ ಲಗೇಜ್ ಸಾಗಣೆ ಬಗ್ಗೆ ಅವಕಾಶ ನೀಡಲಾಗಿದೆ.

ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಲಗೇಜ್ ಸಾಗಾಣೆಯ ನಿಯಮಾವಳಿಗಳನ್ನು ಮಾರ್ಪಾಡು ಮಾಡಲು ತೀರ್ಮಾನಿಸಿದ್ದು, ಅದರಂತೆ ನಾಯಿಯನ್ನು ಕೊಂಡೊಯ್ಯಲು ಒಬ್ಬ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ, ವಿಧಿಸಲಾಗುತ್ತಿದ್ದಂತ ದರದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ನಾಯಿ, ನಾಯಿ ಮರಿಗೆ ಅರ್ಧ ಟಿಕೇಟ್ ದರವನ್ನು ವಿಧಿಸುವಂತೆ ತಿಳಿಸಲಾಗಿದೆ. ಅಲ್ಲದೇ ಸಾಮಾನ್ಯ, ವೇಗದೂತ, ನಗರ, ಹೊರವಲಯ ಬಸ್ಸುಗಳಲ್ಲಿ ಮಾತ್ರ ಸಾಗಣೆ ಮಾಡುವುದನ್ನು ಮುಂದುವರೆಸಲಾಗಿದೆ ಎಂದಿದ್ದಾರೆ.


ಪ್ರತಿ ಪ್ರಯಾಣಿಕರು 30 ಕೆಜಿ ತೂಕದವರೆಗೆ ಲಗೇಜ್ ಉಚಿತವಾಗಿ ಕೊಂಡೊಯ್ಯುವ ಅವಕಾಶದಲ್ಲಿ ಪ್ರಯಾಣಿಕ ವೈಯಕ್ತಿಕ ಲಗೇಜ್ ಸೇರಿದಂತೆ ಬ್ಯಾಗ್, ಸೂಟ್ ಕೇಸ್, ಕಿಟ್ ಬ್ಯಾಗ್, ಇತ್ಯಾದಿ ಕೊಂಡೊಯ್ಯುವ ವಸ್ತುಗಳನ್ನು ( ದಿನಸಿ, ತೆಂಗಿನ ಕಾಯಿ, ರಾಗಿ, ಅಕ್ಕಿ, ಹಿಟ್ಟು, ತರಕಾರಿ, ಹಣ್ಣು, ಹೂವು, ಒಂದು ಸೀಲಿಂಗ್ ಫ್ಯಾನ್, ಒಂದು ಮುಕ್ಸರ್ ಗ್ರೈಂಡರ್ ಬಾಕ್ಸ್) ಉಚಿತವಾಗಿ ಪರಿಮಿತಿಯ 30 ಕೆಜಿ ಒಳಗೆ ಪರಿಗಣಿಸುವಂತೆ ತಿಳಿಸಿದ್ದಾರೆ.

30 ಕೆಜಿಗೂ ಅಧಿಕವಿದ್ದಲ್ಲಿ ಉಚಿತ ಸಾಗಣೆಯ 30 ಕೆಜಿ ಹೊರತುಪಡಿಸಿ ಉಳಿದ ಲಗೇಜ್ ಗೆ ನಿಯಮಾವಳಿಯಂತೆ ಲಗೇಜ್ ದರ ವಿಧಿಸುವಂತೆ ತಿಳಿಸಿದ್ದಾರೆ. ಇದನ್ನು ಹೊರತು ಪಡಿಸಿ ಸಾಮಾನ್ಯ ಸ್ಥಾಯಿ ಆದೇಶ, ತಿದ್ದುಪಡಿ ಆದೇಶ, ಇರತೆ ಆದೇಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದ್ದಾರೆ.

error: Content is protected !!