ಬೆಂಗಳೂರಲ್ಲಿ ಪ್ಲೈ ಓವರ್​ನಿಂದ ಬಿದ್ದು ಇಬ್ಬರು ಯುವಕರು ಸಾವು : ಮತ್ತೊಬ್ಬನಿಗೆ ಗಾಯ

Team Newsnap
1 Min Read
Two youths die after falling from flyover in Bangalore, another injured ಬೆಂಗಳೂರಲ್ಲಿ ಪ್ಲೈ ಓವರ್​ನಿಂದ ಬಿದ್ದು ಇಬ್ಬರು ಯುವಕರು ಸಾವು : ಮತ್ತೊಬ್ಬನಿಗೆ ಗಾಯ

ಡಿವೈಡರ್​​ಗೆ ಡಿಕ್ಕಿ ಹೊಡೆದು ಪ್ಲೈಓವರ್​​ ಕೆಳಗೆ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೆಐಎಬಿ ಏರ್​ಪೋರ್ಟ್​​ ಎಲಿವೇಟೆಡ್ ರಸ್ತೆಯ ಪ್ಲೈ ಓವರ್​​ನಲ್ಲಿ ನಡೆದಿದೆ.

ವಿಕ್ರಂ (28) ಮತ್ತು ಅಮಿತ್ ಸಿಂಗ್ (27) ಮೃತ ಯುವಕರು. ಅಪಘಾತದಲ್ಲಿ ಮತ್ತೊಬ್ಬ ಬೈಕ್ ಸವಾರ ಸೌರಬ್ (27) ಗಂಭೀರವಾಗಿ ಗಾಯಗೊಂಡಿದ್ದಾರೆ, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಪಾಠʼ..!; ಸಿಎಂ ಬೊಮ್ಮಾಯಿಗೆ ಪುನೀತ್‌ ಅಭಿಮಾನಿಗಳ ಮನವಿ

ಅಪಘಾತದಲ್ಲಿ ಮೃತಪಟ್ಟವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.


ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತಂತೆ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment