January 24, 2022

Newsnap Kannada

The World at your finger tips!

4 ವರ್ಷದ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಹಾಕಿದ ಸಮಂತಾ – ನಾಗಚೈತನ್ಯ

Spread the love

ಟಾಲಿವುಡ್ ಸ್ಟಾರ್ ಸಮಂತಾ ಮತ್ತು ನಾಗಚೈತನ್ಯ ಸೋಷಿಯಲ್ ಮೀಡಿಯಾದಲ್ಲಿ ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಧೀಕೃತ ವಿದಾಯ ಹೇಳಿದ್ದಾರೆ.

ಇನ್​​ಸ್ಟಾದಲ್ಲಿ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿ ಸಮಂತಾ ಪೋಸ್ಟ್​ ಮಾಡಿದ್ದಾರೆ. ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಗಂಡ-ಹೆಂಡತಿಯಾಗಿ ದೂರವಾಗಲು ನಿರ್ಧಾರ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

10 ವರ್ಷದ ಲೌವ್ ಸ್ಟೋರಿಗೆ
2017ರ ಅಕ್ಟೋಬರ್ 7 ರಂದು ಸಮಂತ-ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಲೌವ್ ಗೆ ಮುಕ್ತಿ ಹಾಡಿದ್ದರು.

ಕೆಲ ದಿನಗಳಿಂದ ಸಮಂತಾ ಹಾಗೂ ನಾಗಚೈನತ್ಯ ದಂಪತಿ ನಡುವೆ ಬಿರುಕು ಮೂಡಿದೆ, ಇಬ್ಬರೂ ದೂರವಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅಲ್ಲದೇ ಬಾಲಿವುಡ್​​ನಲ್ಲಿ ಹೆಚ್ಚು ಅವಕಾಶಗಳು ಲಭಿಸುತ್ತಿರೋದರಿಂದ ಸಮಂತಾ ಮುಂಬೈನಲ್ಲಿ ಮನೆ ಮಾಡಿ ಅಲ್ಲಿಯೇ ನೆಲೆಸಲಿದ್ದಾರೆ ಅಂತಲೂ ಸುದ್ದಿಗಳು ಕೇಳಿ ಬಂದಿದ್ದವು.

ಈಗ ದಿಢೀರ್ ಅಂತ ಸಮಂತಾ, ಅಕ್ಕಿನೇನಿ ಕುಟುಂಬದ ಸಂಬಂಧಕ್ಕೆ ವಿದಾಯ ಘೋಷಿಸಿದ್ದಾರೆ. ಮಾವ ಅಕ್ಕಿನೇನಿ ನಾಗಾರ್ಜುನ‌ ಸಂಧಾನವೂ ಕೂಡ ವಿಫಲವಾಗಿದೆ.

error: Content is protected !!