December 19, 2024

Newsnap Kannada

The World at your finger tips!

ಉಕ್ರೇನ್

ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ಘೋಷಣೆ – ಉಕ್ರೇನ್​ ಪೂರ್ವ ಪ್ರದೇಶಲ್ಲಿ ಭಾರೀ ಸ್ಫೋಟ

Spread the love

ಉಕ್ರೇನ್ ವಿರುದ್ಧ ಮಿಲಿಟರಿ ಆಪರೇಷನ್​ಗೆ ರಷ್ಯಾ ಅಧ್ಯಕ್ಷ ಪುಟಿನ್ ಪ್ರಕಟಿಸಿದರು.

ಪುಟಿನ್ ಈ ಘೋಷಣೆ ಬೆನ್ನಲ್ಲೇ, ಉಕ್ರೇನ್​ನ ಕೈವ್ ಮತ್ತು ಖಾರ್ಕಿವ್ ಪ್ರದೇಶಗಳಲ್ಲಿ ಭಾರೀ
ಸ್ಫೋಟ ಸಂಭವಿಸಿದೆ

ರಷ್ಯಾದ ಅಧ್ಯಕ್ಷ ವಾಲ್ಡಿಮಿರ್ ಪುಟಿನ್, ಮಿಲಿಟರಿ ಕಾರ್ಯಾಚರಣೆ ಮಾಡುವಂತೆ ತನ್ನ ಸೈನಿಕರಿಗೆ ಸೂಚಿಸಿದ್ದಾರೆ.

ರಷ್ಯಾ ದೂರ ದರ್ಶನದಲ್ಲಿ ಮಾತನಾಡಿರುವ ಅಧ್ಯಕ್ಷ ಪುಟಿನ್, ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.

ನಮ್ಮ ಈ ಕ್ರಮವು ಉಕ್ರೇನ್‌ನಿಂದ ಬರುವ ಬೆದರಿಕೆಗಳಿಗೆ ಪ್ರತಿಕ್ರಿಯೆ ಆಗಿರುತ್ತದೆ. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಗುರಿಯನ್ನು ರಷ್ಯಾ ಹೊಂದಿಲ್ಲ. ರಕ್ತಪಾತದ ಜವಾಬ್ದಾರಿ ಉಕ್ರೇನಿಯನ್ ಸರ್ಕಾರ ಹೊರಲಿದೆ ಎಂದು ಪುಟಿನ್ ಗುಡುಗಿದ್ದಾರೆ.

ಉಕ್ರೇನ್ ಸೈನಿಕರು ಶಸ್ತ್ರಾಸ್ತ್ರಗಳನ್ನ ಕೆಳಗಿಳಿಸಿ ಶರಣಾಗಬೇಕು. ಇಲ್ಲದಿದ್ರೆ ಉಕ್ರೇನ್​​ನ ಪೂರ್ವ ಭಾಗಗಳಲ್ಲಿ ಮಿಲಿಟರಿ ಆಪರೇಷನ್​ ಮಾಡಿ ತಕ್ಕ ಪಾಠ ಕಲಿಸಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!