May 26, 2022

Newsnap Kannada

The World at your finger tips!

ukraine minister

ಉಕ್ರೇನ್‍ನ ಮತ್ತೊಬ್ಬ ಮೇಯರ್ ಅಪಹರಣ ಮಾಡಿದ ರಷ್ಯಾ- ಸಚಿವ ಕುಲೇಬಾ

Spread the love

ರಷ್ಯಾ ಸೈನಿಕರು ಝಪೊರಿಝಿಯಾ ಪ್ರದೇಶದ ಡ್ನಿಪ್ರೊರುಡ್ನೆ ನಗರದ ಮೇಯರ್‌ನನ್ನು ಅಪಹರಿಸಿದ್ದಾರೆ

ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಈ ವಿಷಯ ತಿಳಿಸಿ ಯೆವ್ಹೆನ್ ಮ್ಯಾಟ್ವೀವ್ ಅಪಹರಣರಾದ ಮೇಯರ್. ಇವರನ್ನು ರಷ್ಯಾ ಸೈನಿಕರು ಅಪಹರಿಸಿದ್ದಾರೆ ಎಂದು ಜಪೋರಿಝಿಯಾ ಪ್ರದೇಶದ ರಾಜ್ಯ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಸ್ಟಾರುಖ್ ಭಾನುವಾರ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ಅಧಿಕವಾಗುತ್ತಿದೆ. ದ್ನಿಪ್ರೊರುಡ್ನೆಯ ಮೇಯರ್ ಅವರನ್ನು ಅಪಹರಿಸಲಾಗಿದೆ.

ರಷ್ಯಾದ ವಿರುದ್ಧ ಸ್ಥಳೀಯ ನಾಗರಿಕರು ತಿರುಗಿಬಿದ್ದರುವುದಕ್ಕೆ ರಷ್ಯಾ ಸೈನಿಕರು ಈ ರೀತಿ ಮಾಡುತ್ತಿದ್ದಾರೆ. ಉಕ್ರೇನ್ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ, ರಷ್ಯಾ ಹೆಣೆಯುತ್ತಿರುವ ಕೃತ್ಯವನ್ನು ನಿಲ್ಲಿಸಲು ಎಲ್ಲರೂ ಒಗ್ಗೂಡಬೇಕು ಎಂದು ಸ್ಟಾರುಖ್ ಮನವಿ ಮಾಡಿದ್ದಾರೆ.

error: Content is protected !!